ಬಂಟ್ವಾಳ: ಕರೆಂಕಿ ಮೂಡುನಡುಗೋಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸುತ್ತುಪೌಳಿಯ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ಧರ್ಮಾ ಧಿಕಾರಿ ವಿರೇಂದ್ರ ಹೆಗ್ಡೆಯವರು ಅನುದಾನ ನೀಡಿದ ರೂ. 3 ಲಕ್ಷ ಚೆಕ್ಕನ್ನು ಬಂಟ್ವಾಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುನೀತಾ ನಾಯಕ್ರವರು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ರಾಮಚಂದ್ರರವರಿಗೆ ಹಸ್ತಾಂತರಿಸಿದರು.
darmasthaladida anudana

ಈ ಸಂದರ್ಭ ಯೋಜನಾ ಕಛೇರಿ ಮ್ಯಾನೇಜರ್ ರೂಪಲತಾ, ಸಿದ್ದಕಟ್ಟೆ ವಲಯದ ಮೇಲ್ವಿಚಾರಕ ವಿನಾಯಕ್ ಗುಣಗ, ಸೇವಾ ಪ್ರತಿನಿಧಿ ಆನಂದ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್, ಜತೆ ಕಾರ್ಯದರ್ಶಿ ಗಣೇಶ್ ಗೌಡ, ಸಂತೋಷ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *