ಬಂಟ್ವಾಳ: ತಾಲ್ಲೂಕಿನಲ್ಲಿ ಪುರಾತನ ಹಿನ್ನೆಲೆ ಹೊಂದಿರುವ ಕಡೇಶಿವಾಲಯ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷಿö್ಮÃನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಗುರುವಾರ ರಾತ್ರಿ ದೇವರ ಬಲಿ ಉತ್ಸವ ನಡೆಯಿತು.22btl-Kadeshwalya

ಇಲ್ಲಿನ ಪುರಾತನ ಹಿನ್ನೆಲೆ ಹೊಂದಿರುವ ಕಡೇಶಿವಾಲಯ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷಿö್ಮÃನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಶುಕ್ರವಾರ ಸಮಾಪನಗೊಂಡಿತು.

ನೇತ್ರಾವತಿ ನದಿ ತೀರದ ಈ ದೇವಳದಲ್ಲಿ ಏ.೧ರಂದು ಗೊನೆ ಮುಹೂರ್ತ ನಡೆದು ಬಳಿಕ ಏ.೯ರಂದು ನಡೆದ ಧ್ವಜಾರೋಹಣ ಮೂಲಕ ವಾರ್ಷಿಕ ಜಾತ್ರೆಗೆ ಚಾಲನೆ ಸಿಕ್ಕಿತ್ತು. ಆ ಬಳಿಕ ದೇವರ ಬಲಿ ಉತ್ಸವ ಮತ್ತು ಮಹಾಪೂಜೆ ಸಹಿತ ದೇವರ ಬೀದಿ ಸವಾರಿ, ಕಟ್ಟೆ ಪೂಜೆ, ಚಂದ್ರಮAಡಲ ಉತ್ಸವ, ಮಹಾರಥೋತ್ಸವ, ಸುಡುಮದ್ದು ಪ್ರದರ್ಶನಗೊಂಡಿದೆ. ಗುರುವಾರ ರಾತ್ರಿ ದೇವರ ಬಲಿ ಉತ್ಸವ, ತುಲಾಭಾರ ಸೇವೆ,

ದೇವರು ಮತ್ತು ದೈವದ ಭೇಟಿ, ಕಟ್ಟೆ ಸವಾರಿ ನಡೆದು ಧ್ವಜಾವರೋಹಣಗೊಂಡಿತು. ಇದೇ ವೇಳೆ ದೇಂತಡ್ಕ ಮೇಳದಿಂದ ಯಕ್ಷಗಾನ ಬಯಲಾಟ ನಡೆಯಿತು. ಶುಕ್ರವಾರ ರಾತ್ರಿ ಪರಿವಾರ ದೈವಗಳಿಗೆ ವಾರ್ಷಿಕ ನೇಮೋತ್ಸವ ನಡೆಯಿತು.

ಉಚ್ಚಿಲಂತಾಯ ನೀಲೇಶ್ವರ ಪದ್ಮನಾಭ ತಂತ್ರಿ ಮಾರ್ಗದರ್ಶನದಲ್ಲಿ ಅರ್ಚಕ ಎಂ.ಸುಬ್ರಹ್ಮಣ್ಯ ಭಟ್ ಮುಂಗೂರು, ಕೆ.ಅನಂತ ಪದ್ಮನಾಭ ಭಟ್ ವಿವಿಧ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಾಂತಪ್ಪ ಪೂಜಾರಿ ಪಚ್ಚಡಿಬೈಲು, ಸದಸ್ಯರಾದ ತಿರುಮಲೇಶ್ವರ ಭಟ್ ಕೈಂತಜೆ, ನಾರಾಯಣ ಸಪಲ್ಯ ಮುಂಗೂರು, ಗಣೇಶ ಆರ್.ಶೆಟ್ಟಿ ಪಾಂಡಿಬೆಟ್ಟು, ಲೋಕನಾಥ ಪೂಜಾರಿ ತಿಮರಾಜೆ, ಗಣೇಶ ನಾಯ್ಕ್ ಸಂಪೋಳಿ, ವನಿತಾ ಕೂಸಪ್ಪ ಪೂಜಾರಿ ಪುಣ್ಕೆದಡಿ, ಭಾರತಿ ಸುರೇಂದ್ರ ರಾವ್ ನೆಕ್ಕಿಲಾಡಿ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *