ಬಂಟ್ವಾಳ: ವಾಮದಪದವು ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿಯವರ 160ನೇ ಜನ್ಮ ದಿನಾಚರಣೆಯ ಅಂಗವಾಗಿ ಗುರು ಪೂಜೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವು ಆಲದಪದವಿನ ಸಂಘದ ನಿವೇಶನದಲ್ಲಿ ನಡೆಯಿತು.

ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಕಂಕನಾಡಿ ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ ಚಿತ್ತರಂಜನ್ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಸಂಘಟಿತರಾಗುವ ಮೂಲಕ ಸಮಾಜದ ಶೈಕ್ಷಣಿಕ, ಸಾಮಾಜಿಕ ಅಭಿವೃದ್ದಿಗೆ ಪ್ರಯತ್ನಿಸಬೇಕು. ಸಮಾಜದಲ್ಲಿರುವ ಶಕ್ತಿವಂತರು ಸಮಾಜದ ಹಿಂದುಳಿದವರ ಶ್ರೇಯೋಭಿವೃದ್ದಿಗೆ ಶ್ರಮಿಸುವ ಮೂಲಕ ಪ್ರತಿಯೊಬ್ಬರೂ ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ನಾರಾಯಣ ಗುರು ಮಂದಿರ ಸ್ಥಾಪನೆಯಲ್ಲಿ ಸರ್ವರ ಅವಿರತ ಶ್ರಮ ಅಗತ್ಯ ಎಂದು ಅವರು ಹೇಳಿದರು.

ಕಜೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕು ನಿವೃತ್ತ ವ್ಯವಸ್ಥಾಪಕ ಮೋನಪ್ಪ ಪೂಜಾರಿ ಕಂಡೆತ್ಯಾರು, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಪಿ.ಕೆ.ಸೀತರಾಮ ಪೂಜಾರಿ, ಕರಾಟೆಯಲ್ಲಿ ಚಿನ್ನದ ಪದಕ ಪಡೆದ ಅಶ್ವಿತ ರಾಮಲ್ಕಟ್ಟೆ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಟ್ಟಡ ನಿರ್ಮಾಣ ಸಮಿತಿ ಸಮಿತಿ ಗೌರವಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಮಾತನಾಡಿ ಸಂಘದ ಅಭಿವೃದ್ದಿಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದರು.

ಅರ್ಚಕರಾದ ಶೀತಾರಾಮ ಶಾಂತಿ, ಸಂಘದ ಗೌರವಾಧ್ಯಕ್ಷ ಬಾಬು ಪೂಜಾರಿ ಕೌಡೋಡಿ, ಸಂಘದ ಅಧ್ಯಕ್ಷ ಬೂಬ ಪೂಜಾರಿ ಕುದ್ಕಂದೋಡಿ, ಉಪಾಧ್ಯಕ್ಷ ಕಿಶೋರ್ ಪೂಜಾರಿ ನಾಯರ್ಕುಮೇರು, ಕಟ್ಟಡ ನಿರ್ಮಾಣ ಸಮಿತಿ ಉಪಾಧ್ಯಕ್ಷ ರಮೇಶ ಪೂಜಾರಿ ಕುಡ್ಮೇರು, ರಾಮಣ್ಣ ಪೂಜಾರಿ ಗಂಟರಬೆಟ್ಟು, ಸ್ಥಳದಾನಿ ಮೋನಪ್ಪ ಪೂಜಾರಿ ಪಾಲೆದಡಿ, ಸತೀಶ್ ಪೂಜಾರಿ ಕಯ್ಯಾಬೆ, ಲಿಂಗಪ್ಪ ಪೂಜಾರಿ ಕಲ್ಲುಕೊಡಂಗೆ, ಗ್ರಾಮ ಸಂಚಾಲಕರಾದ ಲಕ್ಷ್ಮಣ ಪೂಜಾರಿ, ಚೇತನ್ ಕುಮಾರ್, ಪ್ರಕಾಶ್ ಪೂಜಾರಿ ಕಲ್ಲುಕೊಡಂಗೆ, ಮಾಧವ ಸುವರ್ಣ, ಎಂ.ಪಿ.ಶೇಖರ್, ಶ್ರೀಧರ ಪೂಜಾರಿ, ಪುಷ್ಪಾನಂದ ಮೂರ್ಜೆ , ನಾರಾಯಣ ಪೂಜಾರಿ ಕಲಾಬಾಗಿಲು ಉಪಸ್ಥಿತರಿದ್ದರು.
ಕಟ್ಟಡ ನಿರ್ಮಾಣ ಸಮಿತಿ ಕಾರ್ಯದರ್ಶಿ ಪ್ರಶಾಂತ್ ಕೋಟ್ಯಾನ್ ಸ್ವಾಗತಿಸಿದರು. ಸಂಘದ ಜತೆ ಕಾರ್ಯದರ್ಶಿ ಚಂದಪ್ಪ ಪೂಜಾರಿ ಅಗಮೆ ವಂದಿಸಿದರು. ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *