ಬಂಟ್ವಾಳ: ಪುರಸಭೆಯ ಆಡಳಿತ ಸಮಿತಿಯು ವಿಪಕ್ಷ ಸದಸ್ಯರಿಗೆ ಸೂಕ್ತ ಗೌರವ ನೀಡದಿರುವುದು,ವಿವಿಧ ದೂರುಗಳಿಗೆ ಹಿರಿಯ ಅಧಿಕಾರಿಗಳು ಸ್ಪಂದಿಸದೆ ನಿರ್ಲಕ್ಷ್ಯ ದೋರಣೆ ಅನುಸರಿಸಿರುವುದನ್ನು ಖಂಡಿಸಿ ನಾಳೆ (ನ.5) ನಡೆಯಲಿರುವ ಪುರಸಭೆಯ ಸಾಮಾನ್ಯ ಸಭೆಯನ್ನು ವಿಪಕ್ಷ ಬಿಜೆಪಿ ಸದಸ್ಯರು ಬಹಿಷ್ಕರಿಸಲು ನಿರ್ಧರಿಸಿದೆ.

ಈ ಸಂಬಂಧ ವಿಪಕ್ಷ ನಾಯಕ ಗೋವಿಂದ ಪ್ರಭು ಅವರು ಸೋಮವಾರ ಮುಖ್ಯಾಧಿಕಾರಿಯವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸದಸ್ಯರಾದ ದೇವದಾಸ ಶೆಟ್ಟಿ, ಭಾಸ್ಕರ ಟೈಲರ್, ಸುಗುಣಾ ಕಿಣಿ, ಸಂದ್ಯಾ ಎಸ್ ನಾಯಕ್ ಅವರು ಸಹಿ ಹಾಕಿದ್ದಾರೆ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕೈಗೊಳ್ಳಲಾಗುವ ನಿರ್ಣಯಕ್ಕೆ ವಿರುದ್ಧವಾಗಿ ನಿರ್ಣಯ ಪುಸ್ತಕದಲ್ಲಿ ದಾಖಲಿಸಿರುವುದು, ಕಾಮಗಾರಿಗಳ ಮಂಜೂರಾತಿಯಲ್ಲೂ ತಾರತಮ್ಯ, ರಾಜಕೀಯ ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಈ ಎಲ್ಲಾ ವಿಷಯಗಳ ಬಗ್ಗೆ ಈಗಾಗಲೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದರೂ ಯಾವುದೇ ರೀತಿಯ ತನಿಖೆಯನ್ನು ನಡೆಸದೆ ನಿರ್ಲಕ್ಷ ವಹಿಸಲಾಗಿದೆ. ಈ ಹಿನ್ನಲೆಯಲ್ಲಿ ಸಾಮಾನ್ಯ ಸಭೆಯನ್ನು ವಿಪಕ್ಷ ಬಿಜೆಪಿ ಸದಸ್ಯರು ಬಹಿಷ್ಕರಿಸುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.
ಸೆ.30ರಂದು ನಡೆದ ಸಾಮಾನ್ಯ ಸಭೆಗೂ ಬಿಜೆಪಿ ಸದಸ್ಯರು ಗೈರು ಹಾಜರಾಗುವ ಮೂಲಕ ಬಹಿಷ್ಕರಿಸಿದ್ದರು. ಇದೀಗ ನಾಳೆ ನಡೆಯುವ ಸಾಮಾನ್ಯ ಸಭೆಗೂ ಗೈರು ಹಾಜರಾಗುವ ಮೂಲಕ ಬಹಿಷ್ಕರಿಸಲು ನಿರ್ಧರಿದರು. ನಿರಂತರವಾಗಿ 2 ಬಾರಿ ವಿಪಕ್ಷ ಬಿಜೆಪಿ ಸದಸ್ಯರು ಸಾಮಾನ್ಯ ಸಭೆಗೆ ಗೈರು ಹಾಜರಿ ಆಗುವ ಮೂಲಕ ಆಡಳಿತ ಪಕ್ಷದ ದೋರಣೆಯ ವಿರುದ್ಧ ಸಮರ ಸಾರಿದ್ದಾರೆ.
ಬಂಟ್ವಾಳ:
ಬಂಟ್ವಾಳ ಪುರಸಭೆಯಲ್ಲಿ ಇದೇ 5ರಂದು ನಡೆಯಲಿರುವ ಸಾಮಾನ್ಯಸಭೆಗೆ ವಿರೋಧ ಪಕ್ಷ ಬಿಜೆಪಿ ಸದಸ್ಯರು ಗೈರು ಹಾಜರಾಗುವ ಮೂಲಕ ಆಡಳಿತ ಪಕ್ಷದ ಸವರ್ಾಧಿಕಾರಿ ಧೋರಣೆ ವಿರುದ್ಧ ಪ್ರತಿಭಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಇಲ್ಲಿನ ಸಾಮಾನ್ಯ ಸಭೆಯಲ್ಲಿ ಕೈಗೊಂಡ ಹಲವಾರು ನಿರ್ಣಯಗಳು ಮತ್ತೆ ಸದ್ದಿಲ್ಲದೆ ತಿದ್ದುಪಡಿಯಾಗುತ್ತಿದ್ದು, ಅನುದಾನ ಹಂಚಿಕೆಯಲ್ಲಿಯೂ ತಾರತಮ್ಯ ನಡೆಸಲಾಗಿದೆ ಎಂದು ಆರೋಪಿಸಿ ಈಗಾಗಲೇ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಬಿಜೆಪಿ ತಿಳಿಸಿದೆ.


