ಬಂಟ್ವಾಳ: ಇಲ್ಲಿನ ಕನ್ಯಾನ ಗ್ರಾಮ ಪರಕ್ಕಜೆ ನಿವಾಸಿ, ಹೋಮಿಯೋಪತಿ ನಾಟಿ ವೈದ್ಯ ಪೂವಪ್ಪ ಭಂಡಾರಿ (೮೫) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಎ.11ರಂದು ಸೋಮವಾರ ನಿಧನರಾದರು.
ಮೃತರಿಗೆ ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಇದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನೇತಾರನಾಗಿ, ಬಂಟ್ವಾಳ ಭಂಡಾರಿ ಸಮಾಜ ಸೆವಾ ಸಂಘದ ಮಾಜಿ ಅಧ್ಯಕ್ಷರಾಗಿ, ಮಂಡಲ ಮಾಜಿ ಸದಸ್ಯರಾಗಿ, ಸಾಹಿತ್ಯಾಸಕ್ತರಾಗಿ ವಿವಿಧ ಪತ್ರಿಕೆಗಳಿಗೆ ಲೇಖನ ಬರೆದು ಅಂಕಣಕಾರ ಪಿ.ಪಿ. ಭಂಡಾರಿ ಎಂದೇ ಗುರುತಿಸಿಕೊಂಡಿದ್ದರು.
