ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಮಿನಿ ವಿಧಾನಸೌಧ ಎದುರು ಸಿಪಿಐ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ಬೆಲೆ ಏರಿಕೆ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಜನವಿರೋಧಿ ನೀತಿ ಮೂಲಕ ಬಡಜನರ ಬದುಕು ದುಸ್ತರಗೊಳಿಸಿದ್ದು, ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೆ ಏರಿದೆ ಎಂದು ಭಾರತ ಕಮ್ಯೂನಿಷ್ಟ್ ಪಕ್ಷದ ಜಿಲ್ಲಾ ಸಹಕಾರ್ಯದರ್ಶಿ ಬಿ.ಶೇಖರ್ ಹೇಳಿದರು.11btl-Protest

ಇಲ್ಲಿನ ಬಿ.ಸಿ.ರೋಡು ಮಿನಿ ವಿಧಾನಸೌಧ ಎದುರು ಸಿಪಿಐ ವತಿಯಿಂದ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಪೆಟ್ರೋಲ್, ಡೀಸೆಲ್, ಗ್ಯಾಸ್, ವಿದ್ಯುತ್ ದರ ಮತ್ತಿತರ ಬೆಲೆ ಏರಿಕೆ ಕೊರೋನಾ ಸಂಕಷ್ಟಕ್ಕೀಡಾದ ಜನತಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.

ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕುಮಾರ್ ಬಂಟ್ವಾಳ್, ಮಹಿಳಾ ಒಕ್ಕೂಟ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್ ಮಾತನಾಡಿದರು. ಸಿಪಿಐ ಮುಖಂಡರಾದ ಭೋಜ ಕರಂಬೆರ, ಜಯಂತ ಕೆ., ಕಮಲಾಕ್ಷ, ಯೋಗೀಶ್ ಕುಮಾರ್, ಗೋಪಾಲ ಬಂಗೇರ, ರಾಜೀವ, ಪೂವಪ್ಪ ಗಟ್ಟಿ, ಕಮಲಾಕ್ಷ, ಎಐವೈಎಫ್ À ಶ್ರೀನಿವಾಸ್, ಹರ್ಷಿತ್, ಮೋಹನ್ ಅರಳ, ಕೇಶವತಿ ಬಂಟ್ವಾಳ, ಮಮತಾ, ಪ್ರೇಮನಾಥ ಕೆ. ಮತ್ತಿತರರು ಪಾಲ್ಗೊಂಡಿದ್ದರು.

By Suddi9

Leave a Reply

Your email address will not be published. Required fields are marked *