ಸುರತ್ಕಲ್: ಮೀನುಗಾರ ಮುಖಂಡ ಗಂಗಾಧರ ಪಾಂಗಳ ಅವರನ್ನು ಕಳೆದ ಮೇ ತಿಂಗಳ ??ರ ರಾತ್ರಿ ಬೈಕಂಪಾಡಿ ಸಮೀಪದ ಮೀನಕಳಿಯ ಎಂಬಲ್ಲಿ ಅಪಘಾತ ನಡೆಸಿ ಕೊಲೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ಎರಡು ದಿನಗಳ ಹಿಂದೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದು, ಮಂಗಳವಾರ ಸಂಜೆ ಪಣಂಬೂರು ಠಾಣಾ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡರು. ಈ ವೇಳೆ ನೂರಾರು ಸಂಖ್ಯೆಯಲ್ಲಿದ್ದ ಮೊಗವೀರ ಸಂಘಟನೆಗಳ ನಾಯಕರು, ಕಾರ್ಯಕರ್ತರು ಪಣಂಬೂರು ಠಾಣೆಗೆ ಮುತ್ತಿಗೆ ಹಾಕಿದ್ದು ಕೆಲಕಾಲ ಉದ್ವಿಗ್ನ ವಾತಾವರಣ ನಿಮರ್ಾಣವಾಗಿತ್ತು.
ಗಂಗಾಧರ ಪಾಂಗಳ ಅವರನ್ನು ಸತೀಶ್ ಬೈಕಂಪಾಡಿ ಮತ್ತಾತನ ತಂಡ ಕೊಲೆಗೈದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹರೀಶ್ ಬೈಕಂಪಾಡಿ, ಭಾಸ್ಕರ ಬೈಕಂಪಾಡಿ ಹಾಗೂ ಪುಷ್ಪರಾಜ್ ಎಂಬವರನ್ನು ಈ ಹಿಂದೆಯೇ ಬಂಧಿಸಿದ್ದರೆ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ತಲೆಮರೆಸಿಕೊಂಡಿದ್ದ. ಆರೋಪಿ ಕೇರಳಕ್ಕೆ ಪರಾರಿಯಾಗಿದ್ದು, ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು, ಮೀನುಗಾರ ಸಮುದಾಯದ ಪ್ರಮುಖರು, ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆಯನ್ನು ನಡೆಸಿ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಆರೋಪಿ ಮಾತ್ರ ಸೆರೆಸಿಕ್ಕಿರಲಿಲ್ಲ.
ಮಂಗಳವಾರ ಸಂಜೆ ಆರೋಪಿ ವಶಕ್ಕೆ:
ಆರೋಪಿ ಸತೀಶ್ ಬೈಕಂಪಾಡಿಯನ್ನು ಮಂಗಳವಾರ ಸಂಜೆ ವಶಕ್ಕೆ ಪಡೆದುಕೊಂಡ ಪಣಂಬೂರು ಠಾಣಾ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಈ ವೇಳೆ ವಿಷಯ ತಿಳಿದ ಮೀನುಗಾರ ಸಂಘಟನೆಗಳ ಪ್ರಮುಖರು, ನಾಗರಿಕರು ಹಾಗೂ ಹತ್ಯೆಗೀಡಾದ ಗಂಗಾಧರ ಪಾಂಗಳ ಮನೆಮಂದಿ, ಕುಟುಂಬಿಕರು ಪಣಂಬೂರು ಠಾಣೆಯ ಮುಂದೆ ಜಮಾಯಿಸಿ ಆರೋಪಿಯನ್ನು ತಮ್ಮ ವಶಕ್ಕೊಪ್ಪಿಸುವಂತೆ ಆಗ್ರಹಿಸಿದರು. ನೂರಾರು ಸಂಖ್ಯೆಯಲ್ಲಿದ್ದ ಜನರು ಠಾಣೆಯ ಮುಂದೆ ಸೇರಿದ್ದು, ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಘೋಷಣೆ ಕೂಗಿದರು.
ಕಮಿಷನರ್ ಭೇಟಿ:
ಪಣಂಬೂರು ಠಾಣೆಗೆ ಕಮಿಷನರ್ ಹಿತೇಂದ್ರ ಅವರು ಆಗಮಿಸಿ ಪೊಲೀಸ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ಬಳಿಕ ಆರೋಪಿ ಸತೀಶ್ ಬೈಕಂಪಾಡಿಯ ವಿಚಾರಣೆ ನಡೆಸಿದರು. ಆನಂತರ ಮೀನುಗಾರ ಮುಖಂಡರನ್ನು ಕರೆಸಿ ಮಾತನಾಡಿ, ಆರೋಪಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ಜನರನ್ನು ಸಮಾಧಾನಪಡಿಸಿದ ಎಸ್.ಐ. ಭಾರತಿ:
ಪಣಂಬೂರು ಠಾಣೆ ಮುಂದೆ ಸೇರಿದ್ದ ಜನರಿಂದ ಪಣಂಬೂರು ಪೊಲೀಸರಿಗೆ ಧಿಕ್ಕಾರ ಕೇಳಿಬರುತ್ತಿತ್ತು. ಆದರೆ ಹಿಂದೆ ಇಲ್ಲಿದ್ದು ಸದ್ಯ ಉಳ್ಳಾಲ ಠಾಣೆಯಲ್ಲಿ ನಿಯೋಜನೆಗೊಂಡಿರುವ ಎಸ್.ಐ.ಭಾರತಿ ಅವರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯ ಮಾತು ಕೇಳಿಬಂತು. ಎಸ್.ಐ. ಭಾರತಿ ಅವರನ್ನು ವಗರ್ಾವಣೆ ಮಾಡಿದ್ದು ಯಾಕೆ? ಅವರು ಇಲ್ಲಿಗೆ ಅಗತ್ಯವಾಗಿ ಬೇಕು, ಅವರನ್ನು ಮತ್ತೆ ಇದೇ ಠಾಣೆಗೆ ಕರೆಸಿಕೊಳ್ಳಿ ಎಂದು ಆಗ್ರಹಿಸಿದರು. ಈ ವೇಳೆ ಆಗಮಿಸಿದ ಎಸ್.ಐ.ಭಾರತಿ ಅವರು ನೆರೆದಿದ್ದ ಜನರನ್ನು ಸಮಾಧಾನಿಸಿ ಆರೋಪಿಯ ರಕ್ಷಣೆಗೆ ಪೊಲೀಸ್ ಇಲಾಖೆ ನಿಲ್ಲುವುದಿಲ್ಲ. ಖಂಡಿತವಾಗಿಯೂ ಆರೋಪಿಗೆ ಶಿಕ್ಷೆಯಾಗುವಂತೆ ಇಲಾಖೆ ನೋಡಿಕೊಳ್ಳುತ್ತದೆ, ಈ ಬಗ್ಗೆ ಭಯ ಬೇಡ ಎಂದರು. ಎಸ್.ಐ. ಮಾತಿಗೆ ಮಣಿದ ಜನರು ನಿಧಾನಕ್ಕೆ ಚದುರಿದರು.





