ಬಂಟ್ವಾಳ: ತಾಲ್ಲೂಕಿನ ಸರಪಾಡಿ ಸಮೀಪದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನ ಬಳಿ ಭಾನುವಾರ ಹೊರಟ ಆಕರ್ಷಕ ಹೊರೆಕಾಣಿಕೆ ಮೆರವಣಿಗೆಗೆ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಚಾಲನೆ ನೀಡಿದರು.
ಇಲ್ಲಿನ ನ ಸರಪಾಡಿ ಸಮೀಪದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನ ಬಳಿ ಭಾನುವಾರ ಹೊರಟ ಆಕರ್ಷಕ ಹೊರೆಕಾಣಿಕೆ ಮೆರವಣಿಗೆಗೆ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಚಾಲನೆ ನೀಡಿದರು.
ಅಕ್ಕಿ ತರಕಾರಿ ಹಿಂಗಾರ ಬಾಳೆ ಎಲೆ, ಬಾಳೆಗೊನೆ ಸಹಿತ ದೇವಳದ ಪ್ರಧಾನ ಕಲಶ, ಪಾಣಿಪೀಠದ ಬೆಳ್ಳಿಯ ಹೊದಿಕೆ, ಉತ್ಸವಮೂರ್ತಿ, ಪಲ್ಲಕಿ ಸಹಿತ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗ, ಹುಲಿವೇಷ ಕುಣಿತ, ಚೆಂಡೆ, ಕೊಂಬು, ಕಳಶ ಹೊತ್ತ ನಾರಿಯರು ಮೆರವಣಿಗೆಯಲ್ಲಿ ಗಮನ ಸೆಳೆದರು.
ಅರ್ಚಕ ಶ್ರೀವತ್ಸ ಭಟ್, ಧರ್ಮದರ್ಶಿ ದೇಜಪ್ಪ ಬಾಚಕೆರೆ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಬಿ.ಸಿ.ರೋಡು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ, ಕಾರ್ಯಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕಗುತ್ತು, ಪ್ರಧಾನ ಕಾರ್ಯದರ್ಶಿ ಸರಪಾಡಿ ಅಶೋಕ ಶೆಟ್ಟಿ, ಹೊರೆಕಾಣಿಕೆ ಸಮಿತಿ ಸಂಚಾಲಕ ರವಿ ಕಕ್ಯಪದವು,ಪ್ರಮುಖರಾದ ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ರಾಜೇಶ್ ಎಲ್.ನಾಯಕ್, ದಯಾನಂದ ಶೆಟ್ಟಿ ಬಿ.ಸಿ.ರೋಡು, ಪುರುಷೋತ್ತಮ ಕಾಯರ್‌ಪಲ್ಕೆ, ಯಶವಂತ ದೇರಾಜೆ, ಭರತ್ ಕುಮ್ಡೇಲ್, ಪುಷ್ಪರಾಜ್ ಶೆಟ್ಟಿ, ಟಿ.ತಾರಾನಾಥ ಕೊಟ್ಟಾರಿ, ಪುರುಷೋತ್ತಮ್ ಪೂಜಾರಿ ಮಜಲು, ಧನಂಜಯ ಶೆಟ್ಟಿ ನಾಡಬೆಟ್ಟು, ಮೋನಪ್ಪ ಪೂಜಾರಿ ಬೈಸೊಂಬು, ರಾಧಾಕೃಷ್ಣ ರೈ ಕೊಟ್ಟಾರಿ, ಸಂತೋಷ್ ಶೆಟ್ಟಿ ಪಿ, ಭುವನೇಶ್ ಪಚ್ಚಿನಡ್ಕ, ಚಂದ್ರಹಾಸ ಶೆಟ್ಟಿ ಹೊಳ್ಳರಗುತ್ತು, ದಿನೇಶ್ ಶೆಟ್ಟಿ ಬಜ, ಸಂತೋಷ್ ಕುಲಾಲ್, ರಮೇಶ್ ಸಾಲಿಯಾನ್ ಮುಂಬಯಿ, ಎಲ್.ಕೆ.ಧರಣ್ ಮಾಣಿ, ನಿರಂಜನ್ ಬಾಚಕೆರೆ, ಸುಂದರ ಬಾಚಕೆರೆ, ಶಶಿಧರ ಬಾಚಕೆರೆ, ಗಿರಿನಾಥ ಶರ್ಮ ಬಾಚಕೆರೆ, ಮೋಹಿನಿ ಬಾಚಕೆರೆ, ಶಕುಂತಳಾ ಟೀಚರ್ ಮತ್ತಿತರರು ಇದ್ದರು.
