ಕೈಕಂಬ : ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮಿತಾ ಎಂ ಶೆಟ್ಟಿ ಹಾಗೂ ಪಿಡಿಒ ಉಗ್ಗಪ್ಪ ಮೂಲ್ಯರ ನೇತೃತ್ವದಲ್ಲಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಮಂಗಳೂರು ವಿಶ್ವವಿದ್ಯಾನಿಲಯ ಸ್ವಾಮ್ಯದ ರಾಷ್ಟ್ರೀಯ ಸೇವಾ ಯೋಜನೆಯ(ಎನ್ನೆಸ್ಸೆಸ್) ಸುಮಾರು ೫೦ ವಿದ್ಯಾರ್ಥಿಗಳು ಪಂಚಾಯತ್ ವ್ಯಾಪ್ತಿಯ ಕತ್ತಲ್ಸಾರ್ ಪಡೀಲ್ ರಸ್ತೆ ಬದಿಯಲ್ಲಿ ಮಾ.15ರಂದು ಮಂಗಳವಾರ ಬೃಹತ್ ಸ್ವಚ್ಛತಾ ಕಾರ್ಯ ನಡೆಸಿದರು.gur-mar-15-danda  gur-mar-15-pdo uggappa mulya-1

ಮಹಿಳೆಗೆ ೨,೦೦೦ ರೂ ದಂಡ

ಕಾಲೇಜಿನ ಸ್ವಯಂ ಸೇವಾ ಯೋಜನೆ ವಿಭಾಗದ ವಿದ್ಯಾರ್ಥಿಗಳು ಹಾಗೂ ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗದವರು ಕಸ ಹೆಕ್ಕಿ ಸಂಗ್ರಹಿಸುತ್ತಿದ್ದಾಗ ತ್ಯಾಜ್ಯ ತುಂಬಿದ್ದ ಪ್ಲಾಸ್ಟಿಕ್ ಬಕೆಟ್‌ನೊಂದಿಗೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಲಲಿತಾ ಎಂಬಾಕೆ ರಸ್ತೆಗೆ ತ್ಯಾಜ್ಯ ಸುರಿದರು. ತಕ್ಷಣ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ಪಿಡಿಒ ಉಗ್ಗಪ್ಪ ಮೂಲ್ಯ, ಸ್ಥಳದಲ್ಲೇ ಆಕೆಗೆ ೨,೦೦೦ ರೂ ದಂಡ ಹೇರಿದರು.gur-mar-15-pdo uggappa mulya-2  gur-mar-15-pdo-mahile

ನಿರಂತರ ಸ್ವಚ್ಛತಾ ಅಭಿಯಾನ :

ಪಡುಪೆರಾರ ಪಂಚಾಯತ್ ವ್ಯಾಪ್ತಿಯ ಬಜ್ಪೆ-ಕೈಕಂಬ ರಾಜ್ಯ ಹೆದ್ದಾರಿಯ ಉದ್ದಗಲಕ್ಕೂ ತ್ಯಾಜ್ಯ ಎಸೆಯಲಾಗುತ್ತಿದ್ದು, ‘ಗ್ರಾಮ ಮಟ್ಟದಿಂದ ಸ್ವಚ್ಛತೆ’ಯ ಕನಸು ಕಂಡಿರುವ ಉಗ್ಗಪ್ಪ ಮೂಲ್ಯರು ಪಿಡಿಒ ಆಗಿ ನೇಮಕವಾದ ಬಂದ ಬಳಿಕ, ರಸ್ತೆ ಬದಿಯಲ್ಲಿ ನಿರಂತರ ಸ್ವಚ್ಛತಾ ಕಾರ್ಯಕ್ಕೆ ಆದ್ಯತೆ ನೀಡಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಸುಂಕದಕಟ್ಟೆ, ಪಡೀಲ್, ಕೈಕಂಬ, ಪಡುಪೆರಾರ ಮತ್ತಿತರ ಪ್ರದೇಶಗಳಲ್ಲಿ ಎರಡೆರಡು ಬಾರಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.gur-mar-15-swacchathe-1

ಮೂರು ತಿಂಗಳ ಹಿಂದೆಯಷ್ಟೇ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಸಾವಿರ ರೂ ದಂಡ ಹೇರಿದ್ದರು. ಸ್ಥಳೀಯ ಸಂಘ-ಸAಸ್ಥೆಗಳ ಸಹಕಾರದೊಂದಿಗೆ ಈಗಾಗಲೇ ಹಲವು ಬಾರಿ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಸಂಗ್ರಹಿಸಲಾದ ಲೋಡ್‌ಗಟ್ಟಲೆ ತ್ಯಾಜ್ಯವನ್ನು ನಿರ್ದಿಷ್ಟ ದಂಪಿಂಗ್ ಯಾರ್ಡ್ಗೆ ಸಾಗಿಸಿದ್ದಾರೆ. ಇವರ ಈ ಕೆಲಸಕ್ಕೆ ಪಂಚಾಯತ್ ಅಧ್ಯಕ್ಷೆ ಅಮಿತಾ ಶೆಟ್ಟಿ, ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಸ್ಥಳೀಯರು ಸಂಪೂರ್ಣ ಸಹಕಾರ ನೀಡಿದ್ದಾರೆ.gur-mar-15-swacchathe-2

ಮಾ. ೧೫ರಂದು ನಡೆದ ಸ್ವಚ್ಛತಾ ಅಭಿಯಾನದಲ್ಲಿ ಅಮಿತಾ ಎಂ ಶೆಟ್ಟಿ, ಪಿಡಿಒ ಉಗ್ಗಪ್ಪ ಮೂಲ್ಯ, ಪಂಚಾಯತ್ ಸದಸ್ಯರಾದ ಸೀತಾರಾಮ, ಅರುಣ್ ಕೋಟ್ಯಾನ್, ಗ್ರಂಥಾಲಯ ಮೇಲ್ವಿಚಾರಕ ಭರತ್ ಕುಮಾರ್ ವಿ, ಮೂಡುಪೆರಾರ ಶಕ್ತಿ ಕೇಂದ್ರ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ಸುಂಕದಕಟ್ಟೆ ಕಾಲೇಜಿನ ಪ್ರಾಧ್ಯಾಪಕರಾದ ವಿಶ್ವನಾಥ ಪೂಜಾರಿ, ಕಮಲಾಕ್ಷಿ, ರೇಷ್ಮಾ, ಚೇತನಾ, ಸಂಘ-ಸಂಸ್ಥೆಯ ಸಕ್ರಿಯ ಸದಸ್ಯರಾದ ಸುಧಾಕರ ಕೊಲಪಿಲ, ದೇವದಾಸ ಮತ್ತಿತರರು ಉಪಸ್ಥಿತರಿದ್ದರು.

“ಪಂಚಾಯತ್ ವತಿಯಿಂದ ರಸ್ತೆ ಬದಿಯಲ್ಲಿ ತುಂಬಿದ್ದ ಕಸ ವಿಲೇವಾರಿ ಮಾಡುತ್ತಿರುವಾಗಲೇ ಮಹಿಳೆಯೊಬ್ಬರು ತ್ಯಾಜ್ಯ ಎಸೆದರು. ತಕ್ಷಣ ಅವರನ್ನು ತಡೆದು, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದರಿಂದ ಆಗುವ ಅನಾಹುತಗಳ ಬಗ್ಗೆ ವಿವರಿಸಿದೆ. ಬಳಿಕ ಆಕೆ, ಎಸೆದ ತ್ಯಾಜ್ಯವನ್ನು ಬಕೆಟ್‌ಗೆ ತುಂಬಿಸಿ ಮನೆಗೆ ಮರಳಿದ್ದಾರೆ. ಮೊದಲು ಗ್ರಾಮದ ಸ್ವಚ್ಛತಾ ಕಾರ್ಯ ನಡೆಯಬೇಕು. ಇಂತಹ ಕಾರ್ಯದಲ್ಲಿ ಗ್ರಾಮವಾಸಿಗಳು ಪಂಚಾಯತ್‌ನೊAದಿಗೆ ಕೈಜೋಡಿಸಬೇಕು” ಎಂದು ಉಗ್ಪ÷್ಪ ಮೂಲ್ಯ ಹೇಳಿದರು.

By suddi9

Leave a Reply

Your email address will not be published. Required fields are marked *