ಬಂಟ್ವಾಳ: ಇಲ್ಲಿನ ಅರಳ ಗ್ರಾಮದ ಪೊರ್ಕಳ ಎಂಬಲ್ಲಿ ಜನವರಿ ೩೧ ರಂದು ಸ್ಥಳೀಯ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಹಾಡು ಹಗಲೇ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೋಲೀಸರು ಮಾ.14ರಂದು ಸೋಮವಾರ ಬಂಧಿಸಿದ್ದಾರೆ.14btl-Ashraf

ಆರೋಪಿ ಅರಳ ಗ್ರಾಮದ ಶುಂಠಿಹಿತ್ಲು ನಿವಾಸಿ ಆಶ್ರಫ್ (೪೨) ಎಂಬಾತನನ್ನು ಸೋರ್ಣಾಡು ಎಂಬಲ್ಲಿ ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈತನಿಂದ ರೂ ೨ ಲಕ್ಷ ಮೌಲ್ಯದ ೫.೫೦ ಪವನ್ ನೆಕ್ಲೆಸ್ ಸರ ವಶಪಡಿಸಿಕೊಂಡಿದ್ದು, ಕಾರ್ಯಾಚರಣೆಯಲ್ಲಿ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ನೇತೃತ್ವದ ಎಸೈ ಹರೀಶ್, ಕ್ರೈಂ ಎಸೈ ಸಂಜೀವ ಮತ್ತಿತರ ಪೊಲೀಸರ ತಂಡ ಪಾಲ್ಗೊಂಡಿತ್ತು ಎಂದು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *