ಬಂಟ್ವಾಳ : ನಮ್ಮ ಯುವಕರು ಸೈನ್ಯಕ್ಕೆ ಸೇರಿ ದೇಶ ಸೇವೆಯಲ್ಲಿ ತೊಡಗಬೇಕು ಚಿಕ್ಕ ಮಕ್ಕಳಿಗೆ ಈ ದೇಶದ ಸೈನ್ಯದ ಬಗ್ಗೆ ಅಭಿಮಾನ ಮೂಡಿಸಿ, ಮಾಹಿತಿ ನೀಡಿದಾಗ ಮುಂದೆ ದೇಶ ಸೇವೆಯ ಜಾಗೃತಿ ಮೂಡುತ್ತದೆ. ದೇಶವನ್ನು ಕಟ್ಟುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ  ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರುWhatsApp Image 2022-03-14 at 5.26.51 PM

ಅವರು ಅಮ್ಮುಂಜೆಯ ವೀರಯೋಧ ಯಾದವ ಫ್ರೆಂಡ್ಸ್ (ರಿ) ಹಾಗೂ ಮಹಿಳಾ ಘಟಕದ “ವಿಂಶತಿ ಸಂಭ್ರಮ”ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.WhatsApp Image 2022-03-14 at 5.26.50 PM (1)

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದರು. ಯೋಧರ ನೆನಪಿಗಾಗಿ ಸಂಸ್ಥೆಯನ್ನು ಕಟ್ಟಿ, ಯೋಧರನ್ನು ಹಾಗೂ ಸೇನೆಗೆ ಸೇರುವವರನ್ನು ನಿರಂತರ ಪ್ರೋತ್ಸಾಹಿಸುತ್ತಿರುವ ಈ ಸಂಘಟನೆಯು 20ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುವುದು ಎಲ್ಲರಿಗೂ ಪ್ರೇರಣಾದಯಕವಾಗಿದೆ ಎಂದರು.WhatsApp Image 2022-03-14 at 5.26.50 PM

ಈ ಸಂದರ್ಭದಲ್ಲಿ ಮಾಜಿ ತಾ. ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಕ್ಯಾ. ಬ್ರಿಜೇಶ್ ಚೌಟ, ಡಾ ಎ ಮಂಜಯ್ಯ ಶೆಟ್ಟಿ, ಡಿ ಎ ನಾಗೇಶ್ ರಾವ್, ಸೋಮಶೇಖರ್ ಶೆಟ್ಟಿ ಅಮ್ಮುಂಜೆಗುತ್ತು, ಜೀವರಾಜ್ ಶೆಟ್ಟಿ ಅಮ್ಮುಂಜೆಗುತ್ತು, ವಾಮನ ಆಚಾರ್ಯ, ಚಂದ್ರಹಾಸ ಪಲ್ಲಿಪಾಡಿ, ಡಿ ಅಬ್ದುಲ್ ಖಾದರ್ ದೊಂಪ, ಉಮೇಶ್ ಸಾಲಿಯಾನ್ ಬೆಂಜನಪದವು, ಚಂದ್ರಹಾಸ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.WhatsApp Image 2022-03-14 at 5.26.49 PM

ನಿವೃತ್ತ ಯೋಧರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಹಾಗೂ ಪಂ ಸದಸ್ಯ ಕಾರ್ತಿಕ್ ಬಲ್ಲಾಳ್ ರನ್ನು ಸನ್ಮಾನಿಸಲಾಯಿತು.

ಸಂಜೆ 6 ರಿಂದ ಅಗಲಿದ ಭಾರತೀಯ ಸೈನಿಕರಿಗೆ “ನುಡಿನಮನ “ಹಾಗೂ “ದೀಪ ನಮನ”ಕಾರ್ಯಕ್ರಮ ನಡೆಯಿತು.

ಸಮಿತಿಯ ಪದಾಧಿಕಾರಿಗಳಾದ ದೇವುದಾಸ್ ಹೆಗ್ಡೆ, ಉದಯ ಕೆ, ನಿಶಾಂತ್ ಕುಮಾರ್, ಎ ಕರುಣಾಕರ ಆಳ್ವ, ಕಾರ್ತಿಕ್ ಬಲ್ಲಾಳ್,ವಿಜಯಲಕ್ಷ್ಮಿ ಬಲ್ಲಾಳ್, ಚೇತನಾ ಎಚ್ ರಾವ್, ಕುಮಾರಿ ನಿಸ್ಮಿತಾ ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗೌರವ ಸಲಹೆಗಾರ ಹರಿಪ್ರಕಾಶ್ ರಾವ್ ಸ್ವಾಗತಿಸಿ, ಸತ್ಯಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು, ಯಕ್ಷ ಸಂಘಟಕ ಬಿ ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಅತಿಥಿ ಕಲಾವಿದರಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನೃತ್ಯ ವೈವಿಧ್ಯ ಹಾಗೂ ರಂಗತರಂಗ ಕಾಪು ಇದರ ಕಲಾವಿದರಿಂದ ಅಧ್ಯಕ್ಷೆರ್ “ಎಂಬ ತುಳು ಹಾಸ್ಯ ನಾಟಕ ಪ್ರದರ್ಶನವಾಯಿತು.

By suddi9

Leave a Reply

Your email address will not be published. Required fields are marked *