ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಇದರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಕಳೆದ ೧೮ ವರ್ಷಗಳ ಹಿಂದೆ ಈ ದೇವಸ್ಥಾನ ಸಂಪೂರ್ಣ ಜೀರ್ಣೋದ್ಧಾರಗೊಳಿಸಿ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನೆರವೇರಿಸಿದ್ದರು.13BTL-B.Nagaraj-Shetty

ಸಮಿತಿ ಗೌರವಾಧ್ಯಕ್ಷರಾಗಿ ರವಿಶಂಕರ ಶೆಟ್ಟಿ ಬಡಾಜೆಗುತ್ತು, ಎ.ರಾಜೇಂದ್ರ ಶೆಟ್ಟಿ ಅರಳ, ರಾಜ ಎಸ್.ಹೊಳ್ಳ, ಸುಬ್ರಹ್ಮಣ್ಯ ಹೊಳ್ಳ, ಕಾರ್ಯಾಧ್ಯಕ್ಷರಾಗಿ ಸಂತೋಷ್ ಕುಮಾರ್ ಚೌಟ, ಪ್ರಧಾನ ಕಾರ್ಯದರ್ಶಿಯಾಗಿ ಡೊಂಬಯ ಬಿ.ಅರಳ, ಕೋಶಾಧಿಕಾರಿಯಾಗಿ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಜೊತೆ ಕಾರ್ಯದರ್ಶಿಯಾಗಿ ಸಚ್ಚಿದಾನಂದ ಎಡಮಲೆ, ಚಂದ್ರಶೇಖರ ಗೌಡ ಕಾರಂಬಡೆ, ಜೊತೆ ಕೋಶಾಧಿಕಾರಿಯಾಗಿ ಚೈತ್ರೇಶ್ ಎಂ., ಅವಿನಾಶ್ ಅಂತರ, ಗೌರವ ಸಲಹೆಗಾರರಾಗಿ ಯಶೋಧರ ರೈ ದೇರಾಜೆಗುತ್ತು, ಶೇಖರ ಅಂಚನ್ ಪಿಲ್ಕಾಜೆಗುತ್ತು, ಪ್ರೇಮಲತಾ ಶೆಟ್ಟಿ ಬಾರ್ಲಗುತ್ತು, ಎಂ.ಪದ್ಮರಾಜ ಬಲ್ಲಾಳ್ ಮಾವಂತೂರುಗುತ್ತು, ಹರ್ಷೇಂದ್ರ ಹೆಗ್ಡೆ ಅಂತರಗುತ್ತು, ಸವಿನ್ ಕುಮಾರ್ ಜೈನ್ ಹಾಂತ್ಲಾಜೆಗುತ್ತು, ಪುರುಷೋತ್ತಮ ಭಟ್ ಕೊಯಿಲಗುತ್ತು, ದೇವದಾಸ ಶೆಟ್ಟಿ ಮಡಂದೂರುಗುತ್ತು, ಪ್ರವೀಣ ಶೆಟ್ಟಿ ಪರಾರಿಗುತ್ತು, ಉಪಾಧ್ಯಕ್ಷರಾಗಿ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ಜಗದೀಶ ಆಳ್ವ ಅಗ್ಗೊಂಡೆ, ಮೋನಪ್ಪ ಆಚಾರ್ಯ ಬೈದಗುತ್ತು, ಪ್ರಕಾಶ್ ಜೈನ್ ಬೊಲ್ಲೋಡಿ, ಸತೀಶ ಆಚಾರ್ಯ ಕೈತ್ರೋಡಿ, ಉಮೇಶ ಡಿ.ಎಂ.ಅರಳ, ಮಾರಪ್ಪ ಕುಲಾಲ್ ಅಣ್ಣಳಿಕೆ, ರವೀಂದ್ರ ರೈ ಕೈತ್ರೋಡಿ, ಚಂದಪ್ಪ ಮೂಲ್ಯ ಕೊಯಿಲ ಆಯ್ಕೆಯಾಗಿದ್ದಾರೆ.

ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ, ಪ್ರಧಾನ ಅರ್ಚಕ ಸುಂದರ ಹೊಳ್ಳ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ಪ್ರಧಾನ ಕಾರ್ಯದರ್ಶಿ ದಿನೇಶ ಸುವರ್ಣ ರಾಯಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಮತ್ತಿತರರು ಇದ್ದರು ಎಂದು ಪ್ರಚಾರ ಸಮಿತಿ ಸಂಚಾಲಕ ಮೋಹನ್ ಕೆ.ಶ್ರೀಯಾನ್ ರಾಯಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *