ವಿಟ್ಲ: ಮಹಿಳಾ ದಿನಾಚರಣೆಯ ಪ್ರಯುಕ್ತ ಜೇಸಿಐ ವಿಟ್ಲ ಘಟಕದಿಂದ ಬಿಸಿಎಂ ವಿದ್ಯಾರ್ಥಿನಿ ನಿಲಯ ವಿಟ್ಲಕ್ಕೆ ಆರೋಗ್ಯಮ್ ಅಸ್ತು ನಿಟ್ಟಿನಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ನಡೆಯಿತು. ವಿಟ್ಲ ಜೇಸಿಐ ಅಧ್ಯಕ್ಷ ಜೇಸಿ ಚಂದ್ರಹಾಸ ಕೊಪ್ಪಳ ಕಾರ್ಯಕ್ರಮವನ್ನು ಸುಸ್ಥಿತಿಗೆ ತಂದರು.
ಲೇಡಿ ಜೇಸಿ ಸಂಯೋಜಕಿ ಸೌಮ್ಯ ಚಂದ್ರಹಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿದ್ದ ಅಭಿಜ್ಞಾ ಜೆ ರೈ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿನಿಯರಿಗೆ ನೈರ್ಮಲ್ಯ ದಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ವಿವರಿಸಿದರು ಹಾಗೂ ವಿದ್ಯಾರ್ಥಿನಿಲಯದ ಸಿಬ್ಬಂದಿ ಶ್ರೀಮತಿ ಹರಿಣಾಕ್ಷಿ ಯವರಿಗೆ ನೈರ್ಮಲ್ಯ ಸಾಮಾಗ್ರಿ ಹಸ್ತಾಂತ ರಿಸಿದರು
