ಕೈಕಂಬ: ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರು ಗ್ರಾಮದ ಕಾಜಿಗುಳಿ ಎಂಬಲ್ಲಿಯ ಬಡ ಕುಟುಂಬವೊಂದು ಕುಟುಂದ ಆಧಾರ ಸ್ಥ0ಭವಾಗಿದ್ದ ಮನೆಯ ಹಿರಿಯ ವ್ಯಕ್ತಿ ಕ್ಯಾನ್ಸರ್ ಎಂಬ ಮಾರಿಯಿಂದಾಗಿ ಹಾಸಿಗೆ ಹಿಡಿದ ಕಾರಣ ಕುಟುಂಬ ಕಂಗಲಾಗಿ ಸಹೃದಯರ ನೆರವಿನ ನಿರೀಕ್ಷೆಯಲ್ಲಿದೆ. 
ಇಲ್ಲಿನ ಬಾಬು ಪೂಜಾರಿ ಎಂಬವರು ಕ್ಯಾನ್ಸರ್ ಪೀಡಿತರಾಗಿ ದುಡಿಯಲಾಗದೆ ಕತ್ತಲ ಕೊನೆಯಲ್ಲಿ ಹಾಸಿಗೆಯಲ್ಲಿ ಮಲಗಿದ್ದಾರೆ. ಕಳೆದ 10 ತಿಂಗಳ ಹಿಂದೆ ಗಂಟಲು ನೋವು ಕಾಣಿಸಿಕೊಂಡಿದ್ದು ವೈದ್ಯರಲ್ಲಿ ಹೋದಾಗ ಕ್ಯಾನ್ಸರ್ ವಕ್ಕರಿಸಿದ್ದು ತಿಳಿದುಬಂದಿತ್ತು ಅದಕ್ಕಾಗಿ ಆಪರೇಷನ್ ಮಾಡಿಸಿಕೊಂಡಿದ್ದಾರೆ ಅಲ್ಲದೇ ಕಿಮೊತೆರಪಿ ಕೂಡಾ ಮಾಡಲಾಗಿದೆ ಇದಕ್ಕಾಗಿಯೇ ಲಕ್ಷಾಂತರ ಖರ್ಚು ಮಾಡಿ ಇದೀಗ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.
ದುಡಿಯುತ್ತಿದ್ದ ಇವರ ಮಗ ಈಗ ಕೆಲಸ ಬಿಟ್ಟು ತಂದೆಯ ಆರೈಕೆಗೆ ನಿಂತಿದ್ದಾರೆ. ಬಾಬು ಅವರ ಪತ್ನಿ ಮೋಹಿನಿ ಬೀಡಿ ಕಟ್ಟಿ ಬಂದ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದಾರೆ, ಇವರ ಆರೋಗ್ಯ ಕೂಡಾ ಆಗಾಗ ಕೈ ಕೊಡುತ್ತಿದೆ.
ಬಾಬು ಅವರ ಚಿಕಿತ್ಸೆ ಗಾಗಿ ತಿಂಗಳಿಗೆ ಒಂದೆರಡು ಬಾರಿ ಆಸ್ಪತ್ರೆಗೆ ಹೋಗುವುದು ಅನಿವಾರ್ಯ. ಈಗಾಗಲೇ ಇವರ ಚಿಕಿತ್ಸೆಗಾಗಿ ಲಕ್ಷಾಂತರ ದುಡ್ಡನ್ನು ಆಸ್ಪತ್ರೆಗೆ ಸುರಿದಾಗಿದೆ ಇದ್ದ ದುಡ್ಡು ಖಾಲಿಯಾಗಿ ಈ ಕುಟುಂಬ ದಿಕ್ಕು ಕಾಣದೆ ಕಂಗಾಳಾಗಿ ಕೂತಿದೆ.
ತಮ್ಮ ಸ್ವಂತ ಜಾಗದಲ್ಲಿ ಟಾರ್ಪಲ್ ಹೊದಿಸಿದ ಪುಟ್ಟ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬ ಜೀವನ ನಿರ್ವಹಣೆಗೆ ಪರದಾಡುತ್ತಿರುವುದರ ಜೊತೆಗೆ ಬಾಬು ಅವರ ಚಿಕಿತ್ಸೆಗೆ ದುಡ್ಡು ಹೊಂದಿಸಲು ಒದ್ದಾಡುತ್ತಿದೆ. ಹಾಸಿಗೆ ಹಿಡಿದಿರುವ ಮನೆ ಯಜಮಾನನ ಚಿಕಿತ್ಸೆಗಾಗಿ ಇದೀಗ ಈ ಕುಟುಂಬ ಸಹೃದಯಿ ದಾನಿಗಳ ನಿರೀಕ್ಷೆಯಲ್ಲಿದೆ. ಈ ಬಡ ಕುಟುಂಬಕ್ಕೆ ನೆರವಾಗುವಿರಾ.
ಚರಣ್(ಮಗ) : 9535118084, ಬ್ಯಾಂಕ್ ಖಾತೆ ವಿವರ: ಮೋಹಿನಿ, ಅಕೌಂಟ್ ನಂಬರ್ 71170100001315, ಬ್ಯಾಂಕ್ ಆಫ್ ಬರೋಡ ಕುಪ್ಪೆಪದವು ಶಾಖೆ, IFSC code BRBOVJKUPP MICR code:575012045.
