ಮಂಗಳೂರು: ಹಿಂದೂ ಜಾಗಣ ವೇದಿಕೆಯ ಪ್ರಮುಖನಾಗಿರುವ ಕೋಡಿಕೆರೆ ಮನೋಜ್ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವುದನ್ನು ವಿರೋಧಿಸಿ ಇಂದು ಸಂಜೆ ಸುರತ್ಕಲ್ ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಮನೋಜ್ ಮೇಲೆ ರಾಜಕೀಯ ಹಿತಾಸಕ್ತಿಯ ಮೂಲಕ ಗೂಂಡಾ ಕೇಸ್ ಜಡಿದು ಜೈಲಿಗಟ್ಟಲಾಗಿದೆ, ಮನೋಜ್ ಮೇಲಿನ ಕೇಸನ್ನು ವಾಪಾಸ್ ಪಡೆದು ತಕ್ಷಣ ಜೈಲಿನಿಂದ ಬಿಡುಗಡೆಗೊಳಿಸಬೇಕೆಂದು ಹಿಂದೂ ಜಾಗರಣ ವೇದಿಕೆಯ ವಕ್ತಾರರು ಆಪಾದಿಸಿದ್ದಾರೆ.

