ಮೂಡುಬಿದರೆ: ಮಹಾಮಸ್ತಾಭಿಷೇಕ ಕೇವಲ ಜೈನಸಮುದಾಯದಿಂದಾಗುವ ಧಾಮರ್ಿಕ ಕಾರ್ಯಕ್ರಮವಲ್ಲ. ಸಮಾಜದ ಎಲ್ಲ ವರ್ಗದವರ ಸಹಕಾರದಿಂದ ಮಾಡುವಂತದ್ದು. ಮಹಾಮಸ್ತಾಭಿಷೇಕದ ನೆಪದಲ್ಲಿ ಸಾಮಾಜಿಕವಾಗಿ ಹಲವಾರು ಕಾಮಗಾರಿಗಳಾಗುತ್ತವೆ. ಮಹಾಮಸ್ತಕಾಭಿಷೇಕದ ರೂಪುರೇಷೆ, ಸಕರ್ಾರದ ಸಹಕಾರದ ಬಗ್ಗೆ ಶೀಘ್ರದಲ್ಲೇ ರಾಜ್ಯದ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಲಿದ್ದೇವೆ ಎಂದು ಮಹಾಮಸ್ತಕಾಭಿಷೇಕ ಮಹೋತ್ಸವದ ಸಮಿತಿಯ ಕಾಯರ್ಾಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದರು.
2015ರ ಜನವರಿ 21ರಿಂದ 31ರವರೆಗೆ ನಡೆಯಲಿರುವ ಕಾರ್ಕಳದ ಭಗವಾನ್ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವಭಾವಿಯಾಗಿ ಮೂಡುಬಿದರೆ ಪದ್ಮಾವತಿ ಕಾಲಮಂದಿರದಲ್ಲಿ ಭಾನುವಾರ ನಡೆದ ಸಮಿತಿಯ ಸಮಾಲೋಚನಾ ಸಭೆ ಮತ್ತು ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾಮಸ್ತಕಾಭಿಷೇಕ ರೂಪುರೇಷೆ: ಸಿಎಂ ಜೊತೆ ಸಮಾಲೋಚನೆ

ಮೂಡುಬಿದರೆ ಶ್ರೀಜೈನಮಠದ ಭಟ್ಟಾರಕ ಚಾರುಕೀತರ್ಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಠದ ವತಿಯಿಂದ ಮಹಾಮಸ್ತಕಾಭಿಷೇಕಕ್ಕೆ 1 ಲಕ್ಷ ರೂ. ದೇಣೀಗೆ ನೀಡಿದರು. ಮೂಡುಬಿದರೆ ಹಾಗೂ ಕಾರ್ಕಳ ಕೇಂದ್ರದ ಬಸದಿಗಳು ಅವಿಭಜಿತ ಜಿಲ್ಲೆಯಲ್ಲೇ ಜೈನ ಯಾತ್ರಾಥರ್ಿ ಆಕಷರ್ಿಸುವ ಕೇಂದ್ರವಾಗಿದೆ. ಕಾರ್ಕಳದಲ್ಲಿ ಆಗುವ ಉತ್ಸವ ಮೂಡುಬಿದರೆಯ ಜೈನ ಸಮುದಾಯದವರು ಸಂಪೂರ್ಣ ಬೆಂಬಲವಿದೆ. ಮೂಡುಬಿದರೆ ಮಠದಲ್ಲಿ ಉತ್ಸವಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುತ್ತೇವೆ. ಸಮಿತಿಯೂ ಮೂಡುಬಿದರೆಯಲ್ಲೊಂದು ಕೌಂಟರ್ ತೆರೆದರೆ ಯಾತ್ರಾಥರ್ಿಗಳಿಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದರು.
ಮಹಾಮಸ್ತಕಾಭಿಷೇಕ ಮಠದ ವತಿಯಿಂದ ಪೂರಕ ವ್ಯವಸ್ಥೆ ಕಲ್ಪಿಸುತ್ತೇವೆ. ಕೌಂಟರ್ ಒಂದನ್ನು ಮೂಡುಬಿದರೆಯಲ್ಲಿ ತೆರೆದರೆ ಇಲ್ಲಿ ಬರುವ ಯಾತ್ರಥರ್ಿಗಳಿಗೆ ಮಾಹಿತಿ ನೀಡಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಮಹಾಮಸ್ತಕಾಭಿಷೇಕ ಪೂರಕವಾಗಿ ಕಾರ್ಕಳದಲ್ಲಿ ಮೂಲಭೂತ ಸೌಕರ್ಯ ಸಕರ್ಾರ ಕಲ್ಪಿಸಲಿದೆ. ಈ ಬಗ್ಗೆ ಅವಿಭಜಿತ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಚಚರ್ಿಸಲಾಗುತ್ತದೆ. ತ್ಯಾಜ್ಯ ನಿರ್ವಹಣೆ, ಸ್ವಚ್ಛತೆಯ ಬಗ್ಗೆ ಸ್ಥಳೀಯಾಡಳಿತ ಗಮನಹರಿಸಬೇಕಾಗುತ್ತದೆ. ನಮ್ಮಲ್ಲಿ ದುಗರ್ುಣ, ಕ್ರೋದವನ್ನು ದೂರ ಮಾಡಿ, ಸಾತ್ವಿಕತೆಯನ್ನು ಬೆಳೆಸುವ ಶಕ್ತಿ ಮಹಾಮಸ್ತಾಭಿಷೇಕಕ್ಕಿದೆ ಎಂದು ಹೇಳಿದರು.
ಮಹಾಮಸ್ತಾಭಿಷೇಕ ಕ್ರೀಡಾಕೂಟಕ್ಕೆ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹಾಗೂ ಕ್ರೀಡಾ ಇಲಾಖೆಯಿಂದ ತಲಾ 1 ಲಕ್ಷ ರೂಪಾಯಿಯನ್ನು ಘೋಷಿಸಲಾಯಿತು.
ಸಮಿತಿಯ ಪ್ರಧಾನ ಕಾರ್ಯದಶರ್ಿ ಎಂ.ಕೆ.ವಿಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಪಿ.ಜಗದೀಶ್ ಅಧಿಕಾರಿ ಅನಿಸಿಕೆ ವ್ಯಕ್ತಪಡಿಸಿದರುಚೌಟರ ಅರಮನೆಯ ಕುಲದೀಪ್.ಎಂ, ಬಸದಿಗಳ ಮೊಕ್ತೇಸರ ದಿನೇಶ್ ಆನಡ್ಕ, ಪಟ್ನಶೆಟ್ಟಿ ಸುದೇಶ್ ಕುಮಾರ್ ಉಪಸ್ಥಿತರಿದ್ದರು.
ಕೃಷ್ಣರಾಜ ಹೆಗ್ಡೆ ಸ್ವಾಗತಿಸಿದರು. ನಿತೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಅಭಿಜಿತ್.ಎಂ ವಂದಿಸಿದರು.

