ಮಂಗಳೂರು: ನಗರದಲ್ಲಿ ಮತ್ತೆ ತಲವಾರು ದಾಳಿ. ಹಳೆಯ ಕೊಲೆಯ ವೈಷಮ್ಯಕ್ಕೆ ಯುವಕನೋರ್ವನ ಕೊಲೆ ಯತ್ನ ನಿನ್ನೆ ರಾತ್ರಿ ಉರ್ವ ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.WhatsApp-Image-2021-11-30-at-6.35.53-AM-765x510

ರೌಡಿಗಳ ತಂಡದ ಗ್ಯಾಂಗ್ ವಾರ್ ನಲ್ಲಿ ಶ್ರವಣ್ ಎಂಬ ಯುವಕನ ಮೇಲೆ 8 ಜನರ ತಂಡವೊಂದು ಮಾರಣಾಂತಿಕ ದಾಳಿ ನಡೆಸಿದೆ. ಶ್ರವಣ್ ಗಂಭೀರವಾಗಿ ಗಾಯಗೊಂಡಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. 2020ರಲ್ಲಿ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಇಂದ್ರಜಿತ್ ಎಂಬಾತನ ಕೊಲೆ ಪ್ರಕರಣದಸೇಡಿಗಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಅಳಕೆ ಗ್ಯಾಂಗ್ ತಂಡದ 8 ಮಂದಿ ರೌಡಿಗಳು ಈ ಕೃತ್ಯ ಎಸಗಿದ್ದಾರೆ. ಈಗ ಇದೊಂದು ಗ್ಯಾಂಗ್ ವಾರ್ ಎನ್ನುವುದು ತನಿಖೆಯಿಂದ ಬಹಿರಂಗಗೊಂಡಿದೆ ಎಂದು ಪೊಲೀಸ್ರು ತಿಳಿಸಿದ್ದಾರೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.WhatsApp-Image-2021-11-30-at-6.35.54-AM-213x300

By suddi9

Leave a Reply

Your email address will not be published. Required fields are marked *