ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ತಿಂಗಳ ಕೊನೆಯ ಬುಧವಾರ ನಡೆಯುತ್ತಿದ್ದ ` ಶ್ರೀ ಸತ್ಯನಾರಾಯಣ ಪೂಜೆ’ ಬುಧವಾರದಿಂದ(ನ. ೨೪) ರಂದು ಪುನರಾರಂಭಗೊಂಡಿತು.
ದೇವಸ್ಥಾನದಲ್ಲಿ ಹಿಂದಿನಿಂದಲೂ ಪ್ರತಿ ತಿಂಗಳ ಕೊನೆಯ ಬುಧವಾರ ಶ್ರೀ ಸತ್ಯನಾರಾಯಣ ಪೂಜೆ ನಡೆಯುತ್ತಿದ್ದುದು ಪ್ರತೀತಿ. ದೇವಸ್ಥಾನದಲ್ಲಿ ನಡೆದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಹಾಗೂ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಈ ಪೂಜೆ ನ. ೨೪ರಿಂದ ಪುನರಾರಂಭಗೊಂಡಿದೆ. ದೇವಳದ ಪ್ರಧಾನ ಅರ್ಚಕ ಮಾಧವ ಭಟ್ ಪೂಜೆ ನೆರವೇರಿಸಿದರು.
ದೇವಸ್ಥಾನದಲ್ಲಿ ನ. ೨೪ರಂದು ೩೫ ಭಕ್ತಾದಿಗಳು ಸತ್ಯ ನಾರಾಯಣ ಪೂಜೆ ಮಾಡಿಸಿಕೊಂಡರು. ಮುಂದೆ ಇಲ್ಲಿ ಹಿಂದಿನಂತೆ ಪ್ರತಿ ತಿಂಗಳ ಕೊನೆಯ ಬುಧವಾರ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಇದಕ್ಕಾಗಿ ಭಕ್ತರು ಸೇವಾ ಕೌಂಟರ್ನಲ್ಲಿ ೨೦೦ ರೂ ರಶೀದಿ ಮಾಡಿಸತಕ್ಕದ್ದು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
