ಬಂಟ್ವಾಳ: ತಾಲ್ಲೂಕಿನ ಪೂಂಜ ಯಕ್ಷಮಿತ್ರರು ಸಂಘಟನೆ ವತಿಯಿಂದ ಸಿದ್ಧಕಟ್ಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ೪ನೇ ವರ್ಷದ ‘ತಾಳಮದ್ದಳೆ’ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಗೋಪಾಲ ಸುವರ್ಣ ಲಿಂಗೋಜಿಕೋಡಿ ಇವರಿಗೆ ಯಕ್ಷಮಿತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅವಿಭಜಿತ ಜಿಲ್ಲೆಯಲ್ಲಿ ಯಕ್ಷಗಾನ ಕಲೆ ಮೂಲಕ ಭಾಷಾ ಸಾಹಿತ್ಯ ಬೆಳವಣಿಗೆಗೆ ಅಪಾರ ಕೊಡುಗೆ ಸಿಗುತ್ತಿದೆ ಎಂದು ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಳದ ಅರ್ಚಕ ಪ್ರಭಾಕರ ಐಗಳ್ ಹೇಳಿದ್ದಾರೆ.
ಪೂಂಜ ಯಕ್ಷಮಿತ್ರರು ಸಂಘಟನೆ ವತಿಯಿಂದ ಸಿದ್ಧಕಟ್ಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ೪ನೇ ವರ್ಷದ ‘ತಾಳಮದ್ದಳೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ವೇಳೆ ಜಿಲ್ಲೆಯ ಆಯ್ದ ಕಲಾವಿದರಿಂದ ‘ಜಾಬಾಲಿ ನಂದಿನಿ-ಸುಧನ್ವಾರ್ಜುನ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಗೋಪಾಲ ಸುವರ್ಣ ಲಿಂಗೋಜಿಕೋಡಿ ಇವರಿಗೆ ಯಕ್ಷಮಿತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಪದ್ಮನಾಭ ಶೆಟ್ಟಿಗಾರ್ ಇವರಿಗೆ ಅಭಿನಂದನೆ ಮತ್ತು ಸಿದ್ಧಕಟ್ಟೆ ವೃತ್ತಕ್ಕೆ ದಿವಂಗತ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಮತ್ತು ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಹೆಸರು ಇಡಲು ಪಂಚಾಯಿತಿಗೆ ಮನವಿ ಸಲ್ಲಿಸಲಾಯಿತು.
ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಪೂಜಾರಿ ಹಲಕ್ಕೆ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯೋಗೀಶ ಆಚಾರ್ಯ ಕುಕ್ಕಿಪಾಡಿ, ಮಾಜಿ ಉಪಾಧ್ಯಕ್ಷ ದೇವಪ್ಪ ಕರ್ಕೇರ ಮತ್ತಿತರರು ಶುಭ ಹಾರೈಸಿದರು. ರಾಜೇಶ ಶೆಟ್ಟಿ ಕೊನೆರೊಟ್ಟು, ಹರೀಶ ಶೆಟ್ಟಿ, ರತ್ನಾಕರ ಶೆಟ್ಟಿ, ಕಿರಣ್ ಕುಮಾರ್ ಮಂಜಿಲ ಮತ್ತಿತರರು ಇದ್ದರು. ಉಮೇಶ ಶೆಟ್ಟಿ ಪಾಲ್ಯ ಮತ್ತು ಹರಿಪ್ರಸಾದ್ ಶೆಟ್ಟಿ ಕುರುಡಾಡಿ ಕಾರ್ಯಕ್ರಮ ನಿರೂಪಿಸಿದರು.
