ಬಂಟ್ವಾಳ: ತಾಲ್ಲೂಕಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ವಿತರಿಸಿದ ಶಿಕ್ಷಣಪ್ರೇಮಿ ಮನೋಜ್ ಶೆಟ್ಟಿ ಆರಂಬೋಡಿ ಇವರನ್ನು ಮಂಗಳವಾರ ಸನ್ಮಾನಿಸಲಾಯಿತು.2btl-Rayeeಗ್ರಾಮೀಣ ವಿದ್ಯಾರ್ಥಿಗಳಿಗೆ ಸರ್ಕಾರಿ ಸೌಲಭ್ಯದ ಜೊತೆಗೆ ದಾನಿಗಳ ನೆರವು ದೊರೆತಾದ ಶಾಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಹೇಳಿದ್ದಾರೆ.

ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಉಚಿತ ಪುಸ್ತಕ ವಿತರಿಸಿದ ಶಿಕ್ಷಣಪ್ರೇಮಿ ಮನೋಜ್ ಶೆಟ್ಟಿ ಆರಂಬೋಡಿ ಇವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ಶುಭ ಹಾರೈಸಿದರು. ಇದೇ ವೇಳೆ ಉಚಿತ ಪುಸ್ತಕ ವಿತರಿಸಿದ ಶಿಕ್ಷಣಪ್ರೇಮಿ ಮನೋಜ್ ಶೆಟ್ಟಿ ಆರಂಬೋಡಿ ಇವರನ್ನು ಸನ್ಮಾನಿಸಲಾಯಿತು.

ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ, ಗ್ರಾಮ ಪಂಚಾಯಿತಿ ಸದಸ್ಯೆ ಉಷಾ ಸಂತೋಷ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ಗೌಡ, ಉಪಾಧ್ಯಕ್ಷೆ ಗೀತಾ, ವಿಶ್ವನಾಥ ಗೌಡ ಮತ್ತಿತರರು ಇದ್ದರು. ಮುಖ್ಯಶಿಕ್ಷಕ ಜಯರಾಮ ಪಡ್ರೆ ಸ್ವಾಗತಿಸಿ, ಶಿಕ್ಷಕಿ ಗಾಯತ್ರಿದೇವಿ ವಂದಿಸಿದರು. ಶಿಕ್ಷಕ ಶ್ರೀಪತಿ ಭಟ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *