ಕೃಷ್ಣರಾಜಪೇಟೆ: ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಸಹೋದರ ಮಹದೇವಪ್ಪ ಅವರ ಧರ್ಮಪತ್ನಿ ಶಾರದಮ್ಮ ಮಹದೇವಪ್ಪ(೮೦) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ಬೂಕನಕೆರೆ ಗ್ರಾಮಕ್ಕೆ ಆಗಮಿಸಿ ತಮ್ಮ ಅತ್ತಿಗೆ ಶಾರದಮ್ಮ ಅವರಿಗೆ ಅಂತಿಮ ನಮನ ಸಲ್ಲಿಸಿದರು.04-KRPETE-.03ಬೂಕನಕೆರೆ ಗ್ರಾಮದಲ್ಲಿ ವಾಸವಾಗಿದ್ದ ಶಾರದಮ್ಮ ಅವರು ಕಳೆದ ಹದಿನೈದು ದಿನಗಳಿಂದ ವಯೋಸಹಜವಾದ ಖಾಯಿಲೆಯಿಂದ ಬಳಲುತ್ತಿದ್ದರು. ಇಂದು ಮುಂಜಾನೆ ಮನೆಯಲ್ಲಿ ಮಲಗಿದ್ದಂತೆಯೇ ಅಸುನೀಗಿದ್ದ ಶಾರದಮ್ಮ ಅವರ ಅಂತ್ಯ ಸಂಸ್ಕಾರವು ಬೂಕನಕೆರೆ ಗ್ರಾಮದಲ್ಲಿ ನೆರವೇರಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ತಮ್ಮ ಪುತ್ರಿಯರೊಂದಿಗೆ ತಮ್ಮ ಜನ್ಮಭೂಮಿ ಬೂಕನಕೆರೆ ಗ್ರಾಮಕ್ಕೆ ಆಗಮಿಸಿದ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಅತ್ತಿಗೆ ಶಾರದಮ್ಮ ಅವರ ಮೃತದೇಹಕ್ಕೆ ಶ್ರೀಗಂಧದ ಹಾರವನ್ನು ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು.04-KRPETE-03ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಸೋದರಳಿಯಂದಿರಾದ ರಾಜ್ಯ ಹಾಲು ಮಹಾಮಂಡಳದ ನಿರ್ದೇಶಕ ಎಸ್.ಸಿ.ಅಶೋಕ್, ಸಿಂದಘಟ್ಟ ಅರವಿಂದ, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್‌ಅರವಿಂದ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಶೀಳನೆರೆ ಅಂಬರೀಶ್, ಕಿಕ್ಕೇರಿಪ್ರಭಾಕರ್, ಯಡಿಯೂರಪ್ಪ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಮಧುಸೂದನ್, ಮುಖಂಡರಾದ ಶ್ಯಾಂಪ್ರಸಾದ್, ಜವರಾಯಿಗೌಡ, ಸರ್ವಮಂಗಳಾವೆAಕಟೇಶ್, ಮೀನಾಕ್ಷಿಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.

ಕೃಷ್ಣರಾಜಪೇಟೆ ತಾಲೂಕಿನ ಬೂಕನೆಕೆರೆ ಗ್ರಾಮದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಸಹೋದರ ಮಹದೇವಪ್ಪ ಅವರ ಪತ್ನಿ ತಮ್ಮ ಅತ್ತಿಗೆ ಶಾರದಮ್ಮಮಹದೇವಪ್ಪ(೮೦) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ಬೂಕನಕೆರೆ ಗ್ರಾಮಕ್ಕೆ ಆಗಮಿಸಿ ತಮ್ಮ ಅತ್ತಿಗೆ ಶಾರದಮ್ಮ ಅವರಿಗೆ ಅಂತಿಮ ನಮನ ಸಲ್ಲಿಸಿದರು.

By suddi9

Leave a Reply

Your email address will not be published. Required fields are marked *