ಮುಂಬಯಿ : ಉಡುಪಿ ಜಿಲ್ಲೆಯ ಸಾಂತೂರು ಕೊಡಂಗಲ ಗರಡಿಮನೆ ನಾರಾಯಣ ಪೂವ ಪೂಜಾರಿ (೮೩.) ಅ.೦೩ರಂದು ರವಿವಾರ ತಡ ರಾತ್ರಿ ವಯೋಸಹಜ ಅಸ್ವಸ್ಥತೆಯಿಂದ ಮುಂಬಯಿ ಸಾಂತಕ್ರೂಜ್ ಪೂರ್ವದ ವಕೋಲಾ ದೋಭಿಘಾಟ್ ಇಲ್ಲಿನ ಪಂಚಶೀಲ್ ಅಪಾರ್ಟ್ಮೆಟ್ನ ಸ್ವನಿವಾಸದಲ್ಲಿ ನಿಧನರಾದರು. 
ಎಲ್ಐಸಿ ವಿಮಾ ಸಂಸ್ಥೆಯಲ್ಲಿ ವೃತ್ತಿನಿರತರಾಗಿದ್ದು ವಿಶ್ರಾಂತ ಜೀವನ ನಡೆಸುತ್ತಿದ್ದ ಮೃತರು ಪತ್ನಿ, ಎರಡು ಗಂಡು, ಎರಡು ಹೆಣ್ಣು (ಅಳಿಯ, ಸಾಯಿಕೇರ್ ಸಂಸ್ಥೆಯ ಆಡಳಿತ ನಿರ್ದೇಶಕ ಸುರೇಂದ್ರ ಎ.ಪೂಜಾರಿ) ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಸೋಮವಾರ (ಅ.೦೪) ಮಧ್ಯಾಹ್ನ ವಕೋಲಾ ಇಲ್ಲಿನ ಸ್ಮಶನಭೂಮಿಯಲ್ಲಿ ನೆರವೇರಿಸಲಾಯಿತು.
