ಕೈಕಂಬ : ರಾಷ್ಟ್ರಪಿತ ಗಾಂಧೀಜಿಯವರ ೧೫೩ನೇ ಜನ್ಮದಿನವಾದ ಅ. ೨ರಂದು ಕರಿಯಂಗಳ ಗ್ರಾಮ ಪಂಚಾಯತ್ನಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸ್ಥಳೀಯ ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಮಹತ್ಮಾಗಾಂಧಿ ಉದ್ಯೋಗಖಾತರಿ ಯೋಜನೆಯಲ್ಲಿ ಅರ್ಜಿ ಸ್ವೀಕರಿಸಲಾಯಿತು. ನಂತರ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿ ಪಾಡಿ, ಉಪಾಧ್ಯಕ್ಷೆ ವೀಣಾ ಆಚಾರ್ಯ ಹಾಗೂ ಸದಸ್ಯರು ಇದ್ದರು.

