ಬಂಟ್ವಾಳ: ಕಲ್ಲಿಗೆ, ಅಮ್ಮುಂಜೆ, ಕರಿಯಂಗಳ, ತೆಂಕಬೆಳ್ಳೂರು, ಬಡಗ ಬೆಳ್ಳೂರು, ಕೂರಿಯಾಳ, ಅಮ್ಟಾಡಿ ಮತ್ತು ಅರಳ ವಲಯ ಕಾಂಗ್ರೇಸ್ ಸಮಿತಿ ಇದರ ಜಂಟಿ ಆಶ್ರಯದಲ್ಲಿ ಫಾದರ್ ಮುಲ್ಲ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ಆ.೨ರಂದು ಶನಿವಾರ ೯ಗಂಟೆಯಿಂದ ತೊಡಂಬಿಲ ಚಚ್೯ ಹಾಲ್ ಪಚ್ಚಿನಡ್ಕದಲ್ಲಿ “ಬೃಹತ್ ರಕ್ತದಾನ ಶಿಬಿರ, ಉಚಿತ ಆರೋಗ್ಯ ಮತ್ತು ಕಣ್ಣು ತಪಾಸಣಾ ಶಿಬಿರ ಉಚಿತ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ”ವು ನಡೆಯಲಿದೆ ಎಂದು ಮಾಜಿ ಜಿಲ್ಲಾ ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಬೆಳಗ್ಗೆ ೯ಗಂಟೆಗೆ ಗಾಂದಿ ಕಟ್ಟೆಯ ಉದ್ಘಾಟನೆ, ೯.೩೦ ಕ್ಕೆ ಶಿಬಿರದ ಉದ್ಘಾಟನೆಗೊಳ್ಳಲಿದೆ.
ವಿ.ಸೂ: ಸುಮಾರು ೧೦೦೦, ಆರೋಗ್ಯ ಕಾರ್ಡ್ ವಿತರಣೆ ಮಾಡುವ ಗುರಿಯನ್ನು ಹೊಂದಿದ್ದು ಮೊದಲು ಬಂದವರಿಗೆ ಮೊದಲ ಆಧ್ಯತೆ
