ಬಂಟ್ವಾಳ: ಪುತ್ತೂರು ಮೂಡೂರು ಗ್ರಾಮದ ಕಡ್ಯೆ ನಿವಾಸಿ, ನಿವೃತ್ತ ಎಎಸೈ ಶಾಂತಪ್ಪ ಗೌಡ( ೭೧) ಅಸೌಖ್ಯದಿಂದ 17ರಂದು ಶುಕ್ರವಾರ ಬೆಳಿಗ್ಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ನಿವೃತ್ತಿ ಹೊಂದಿದ್ದ ಇವರು ಬಳಿಕ ಕೃಷಿಕರಾಗಿ ಗುರುತಿಸಿಕೊಂಡಿದ್ದರು. ಮೃತರು ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.
