ಬಂಟ್ವಾಳ: ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಬಂಟ್ವಾಳ ತಾಲೂಕು ಇದರ ಎರಡನೇ ವಾರ್ಷಿಕ ಮಹಾಸಭೆಯು ಸಮಿತಿಯ ಅಧ್ಯಕ್ಷರಾದ ಬಿ.ಎಂ ಪ್ರಭಾಕರ ದೈವಗುಡ್ಡೆ ಇವರ ಅಧ್ಯಕ್ಷತೆಯಲ್ಲಿ ಬಿಸಿರೋಡು ರಕ್ತೇಶ್ವರಿ ದೇವಸ್ಥಾನದ ಮಿನಿ ಹಾಲ್ ನಲ್ಲಿ ನಿನ್ನೆಜರುಗಿತು. ಸಭೆಯಲ್ಲಿ ಗತವರ್ಷದಲ್ಲಿ ಕೊರೊನಾ ಹಾಗೂ ಇನ್ನಿತರ ಪ್ರಕೃತಿ ವಿಕೋಪ ಕಾರಣಗಳಿಂದ ಮೃತರಾದ ಹಲವಾರು ಸಂಗಾತಿಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘಟನೆಯ ಪ್ರಧಾನ ಕಾರ‍್ಯದರ್ಶಿ ಕಳೆದ ಅವಧಿಯಲ್ಲಿ ನಡೆಸಿದ ಚಟುವಟಿಕಾ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.Prakash Shetty Thumbeಮುಂದಿನ ಸಾಲಿಗೆ ಸುಮಾರು ೪೯ ಜನ ಸದಸ್ಯರಿರುವ ಕಾರ‍್ಯಕಾರಿ ಸಮಿತಿ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಶ್ರೀ ಪ್ರಕಾಶ್ ಬಿ.ಶೆಟ್ಟಿ ಶ್ರೀ ಶೈಲ ತುಂಬೆ, ಉಪಾಧ್ಯಕ್ಷರುಗಳಾಗಿ ಶ್ರೀ ರಾಜಾಚಂಡ್ತಿಮಾರ್, ಶ್ರೀ.ಜಗನ್ನಾಥ್ ಬಂಟ್ವಾಳ, ಶ್ರೀ ಸಯ್ಯದ್‌ ಅಬ್ದುಲ್‌ ಕರೀಂ, ಪ್ರಧಾನ ಕಾರ‍್ಯದರ್ಶಿಯಾಗಿ ಶ್ರೀ ಬಿ.ಶೇಖರ್, ಸಹಕರ‍್ಯದರ್ಶಿಯಾಗಿ ಸುರೇಶ್‌ಕುಮಾರ್ ಬಂಟ್ವಾಳ್ ಮರುಆಯ್ಕೆಗೊಂಡರು, ಶ್ರೀ ರಿರ‍್ಡ್ ಶಂಭೂರು ಹಾಗೂ ಬದ್ರುದ್ದೀನ್ ನಾವೂರು ನೂತನ ಸಹಕರ‍್ಯದರ್ಶಿಗಳಾಗಿ ಆಯ್ಕೆಗೊಂಡರು.ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಶ್ರೀ ಚಂದ್ರ ಶೇಖರ ಪೂಜಾರಿ ಹಾಗೂ ಕೋಶಾಧಿಕಾರಿಯಾಗಿ ಸುರೇಂದ್ರ ಕೋಟ್ಯಾನ್‌ ಅವರನ್ನು ಮರು ಆಯ್ಕೆಗೊಂಡರು.

ಸಭೆಯಲ್ಲಿ ಹಲವಾರು ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮುಂದಿನ ಕರ‍್ಯಸೂಚಿಗಳ ಬಗ್ಗೆ ಮುಂದೆ ನಡೆಯುವಕರ‍್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಸಂಘಟನೆಯನ್ನು ಬಲಪಡಿಸಲು ಸದಸ್ಯತ್ವನ್ನು ಹೆಚ್ಚಿಸಲು ಈ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ಪ್ರಾರಂಭದಲ್ಲಿ ಸಂಘಟನೆಯ ಸಹಕರ‍್ಯದರ್ಶಿ ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *