ಬಂಟ್ವಾಳ: ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಸಂತ ಅಂತೋನಿ ಚರ್ಚ್‌ನಲ್ಲಿ ಬುಧವಾರ ತೆನೆ ಹಬ್ಬವನ್ನು ಆಚರಿಸಲಾಯಿತು. ಅಲ್ಲಿಪಾದೆ ಚರ್ಚ್ ಧರ್ಮಗುರು ವಂ| ಫಾ| ಫ್ರೆಡ್ರಿಕ್ ಮೊಂತೆರೋ ಅವರ ನೇತೃತ್ವದಲ್ಲಿ  ಭಕ್ತರು ಬಲಿ ಪೂಜೆ ಅರ್ಪಿಸಿದರು.WhatsApp Image 2021-09-08 at 5.16.52 PM (1)ಈ ಸಂದರ್ಭದಲ್ಲಿ ಮಾತೆ ಮರಿಯಮ್ಮ ಅವರ ಮೂರ್ತಿಗೆ ಪುಷ್ಪಾರ್ಚನೆ ನಡೆಸಲಾಯಿತು.ಬಲಿಪೂಜೆಯ ಬಳಿಕ ಪರಿಸರದ ಸಾರ್ವಜನಿಕರ ಸಹಿತ ಕ್ರೈಸ್ತ ಬಾಂಧವರಿಗೆ ಕಬ್ಬು ಮತ್ತು ತೆನೆಯನ್ನು ವಿತರಿಸಲಾಯಿತು. ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ನವೀನ್ ಜಾನ್ಸನ್‌ಮೊರಾಸ್, ಕಾರ್ಯದರ್ಶಿ ಕಿರಣ್ ನೊರೊನ್ಹಾ, ಕ್ಲೂನಿ ಕಾನ್ವೆಂಟ್‌ನ ಧರ್ಮಭಗಿನಿ ಅರ್ಚನಾ, ವೈ.ಸಿ.ಎಸ್. ಮತ್ತು ಐ.ಸಿ.ವೈ.ಯಂ., ಚರ್ಚ್ ಪಾಲನ ಮಂಡಳಿ ಸಮಿತಿ  ಸದಸ್ಯರು ಉಪಸ್ಥಿತರಿದ್ದರು.WhatsApp Image 2021-09-08 at 5.16.52 PM

WhatsApp Image 2021-09-08 at 5.16.53 PM

By suddi9

Leave a Reply

Your email address will not be published. Required fields are marked *