ಬಂಟ್ವಾಳ: ಸಂಪ್ರದಾಯದ ಕಟ್ಟು ಪಾಡಿನಂತೆ ಪಣೋಲಿಬೈಲ್ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಅನುವಂಶಿಕ ಪ್ರಧಾನ ಅರ್ಚಕರಾಗಿದ್ದ ದಿ!ಗುಡ್ಡ ಮೂಲ್ಯ ಯಾನೆ ಬಾಬು ಮೂಲ್ಯರ ಉತ್ತರಾಧಿಕಾರಿಯಾದ ದೈವಸ್ಥಾನದ ಒಂದನೇ ಪ್ರಧಾನ ಅರ್ಚಕ ಶ್ರೀ ಗುಡ್ಡ ಮೂಲ್ಯ ಯಾನೆ ವಾಸುದೇವ ಮೂಲ್ಯರಿಗೆ, ಶ್ರೀ ಧಾಮ‌ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಪೂಜ್ಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಹಾಗೂ ಎರಡನೆ ಅರ್ಚಕರಾದ ಶ್ರೀ ನಾರಾಯಣ ಮೂಲ್ಯ, ಮೂರನೆ ಅರ್ಚಕರಾದ ಮೋನಪ್ಪ ಮೂಲ್ಯ, ಹಾಗೂ ಕುಟುಂಬದ ಹಿರಿಯ ಸದಸ್ಯರಾದ ಪೂವಪ್ಪ ಮೂಲ್ಯ ಕುಂಡಡ್ಕ, ಬೂಬ ಸಾಲ್ಯಾನ್ ಮತ್ತು ಕುಟುಂಬದ ಸದಸ್ಯರು ಹಾಗೂ ಶ್ರೀ ಪಣೋಲಿಬೈಲ್ ಶ್ರೀ ಕಲ್ಲುರ್ಟಿ ದೈವಸ್ಥಾನದ ಭಂಡಾರದ ಮನೆಯ ನವೀನ್ ಕುಮಾರ್, ಉಮೇಶ್ ಕುಲಾಲ್ ಮಂಚಿ, ಮತ್ತು ಗ್ರಾಮಸ್ಥರು, ಭಕ್ತಾಧಿಗಳ ಸಮ್ಮುಖದಲ್ಲಿ ಶ್ರೀ ಕ್ಷೇತ್ರದ ಗರ್ಭ ಗುಡಿಯ ಮಂಭಾಗದಲ್ಲಿ , ಕಟ್ಟು ಕಟ್ಟಳೆಯಂತೆ ದೈವದ ಪ್ರಧಾನ ಅರ್ಚಕರ ಸ್ವರ್ಣ ಬಳೆ ತೊಡಿಸಿ ದೈವದ ಅರ್ಚಕ ಜವಾಬ್ದಾರಿ ನೀಡಲಾಯಿತು.WhatsApp Image 2021-09-08 at 11.31.36 AMಕುಟುಂಬದ ಕಟ್ಟು ಪಾಡಿನ ಬಗ್ಗೆ ದೈವಸ್ಥಾನದ ಸಂಭಂಧಪಟ್ಟವರಿಗೆ ದೈವಸ್ಥಾನದ ಕಾರ್ಯ ನಿರ್ವಹಣಾಧಿಕಾರಿಯವರು ನೀಡಿರುವ ಮಾರ್ಗಸೂಚಿಯಂತೆ  ಕೋವಿಡ್ ನಿಯಮಾವಳಿಯ ಪ್ರಕಾರ ಕನಿಷ್ಠ ಸಂಖ್ಯೆಯಲ್ಲಿ ಭಾಗವಹಿಸಿ ತಲತಲಾಂತರದಿಂದ ನಡೆದು ಕೊಂಡು ಬಂದ ಸಂಪ್ರದಾಯದಂತೆ ನಡೆಸಲಾಯಿತು, ಈ ಸಂಧರ್ಭದಲ್ಲಿ ಶ್ರೀ ರಮೇಶ್ ಕುಲಾಲ್ ಪಣೋಲಿಬೈಲ್, ರಾಜು ಕುಲಾಲ್, ಲೋಹಿತ್ ಕುಮಾರ್ ಯಸ್ ಪಣೋಲಿಬೈಲ್, ಕುಕ್ಕುಟ ಸಮಿತಿಯ ಅಧ್ಯಕ್ಷ ಮತ್ತು ಮಾತ್ರ ಸಂಘದ ಜಿಲ್ಲಾಉಪಾಧ್ಯಕ್ಷ ಶ್ರೀ ದಯಾನಂದ ಅಡ್ಯಾರ್, ಕುಲಾಲ ಕುಂಬಾರ ವೇದಿಕೆ ಪಣೋಲಿಬೈಲಿನ ಅಧ್ಯಕ್ಷರು ರಮೇಶ್ ಎಂ,ಭಂಡಾರದ ಮನೆ, ಲಿಂಗಪ್ಪ ಬಂಗೇರ ಕಾರಜೆ, ಕುಲಾಲ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ್, ಕಾರ್ತಿಕ್ ಬಂಟ್ವಾಳ್, ಪುನೀತ್ ಕಾಮಾಜೆ, ಜಯರಾಮ ಶೆಟ್ಟಿ ನಗ್ರಿಗುತ್ತು, ನಾಗೇಶ್ ಬಂಗೇರ, ಮನೋಜ್ ಕುಮಾರ್, ಬಾಲಕ್ರಷ್ಣ ಕುಲಾಲ್, ಗೋಪಾಲ ಕುಲಾಲ್, ಹಾಗೂ ಹೆಚ್ಚಿನ ಭಕ್ತಾದಿಗಳು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *