ವಿಟ್ಲ : ಯುವಕ ಮಂಡಲ ವಿಟ್ಲ ಇದರ ೪೪ ನೇ ವರ್ಷದ ಮೊಸರು ಕುಡಿಕೆ ಉತ್ಸವವು ವಿಟ್ಲದ ಶಿವಂ ಡ್ಯಾನ್ಸ್ ಅಕಾಡಮಿಯಲ್ಲಿ ನಡೆಯಿತು. ಅಧ್ಯಾಪಕರ ಸಹಕಾರಿ ಸಂಘದ ಅರ್ಧಯಕ್ಷ ರಮೇಶ್ ರಾಯಿ ಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯುವಕ ಮಂಡಲದ ಅಧ್ಯಕ್ಷ ವಸಂತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಶ್ರೀ ಕೃಷ್ಣ ಭಾಗವಹಿಸಿದ್ದರು.SHV_3930ಈ ಸಂದರ್ಭದಲ್ಲಿ ಶಿವಂ ಡ್ಯಾನ್ಸ್ ಸಹಯೋಗದೊಂದಿಗೆ ನಡೆದ ಶ್ರೀ ಕೃಷ್ಣ ವೇಷ ಫೋಟೋ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಶಿವಂ ಡ್ಯಾನ್ಸ್ ಅಕಾಡಮಿಯ ಸುಧೀರ್ ನಾಯ್ಕ ವೇದಿಕೆಯಲ್ಲಿದ್ದರು. ಯುವಕ ಮಂಡಲದ ಕಾರ್ಯದರ್ಶಿ ಜನಾರ್ಧನ ಪದ್ಮಶಾಲಿ ಸ್ವಾಗತಿಸಿದರು. ನಿಕಟ ಪೂರ್ವ ಅಧ್ಯಕ್ಷ ಸದಾನಂದ ಗೌಡ ಸೇರಾಜೆ ವಂದಿಸಿದರು. ಮಾಜಿ ಗೌರವಾಧ್ಯಕ್ಷ ಸುದರ್ಶನ ಪಡಿಯಾರ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *