ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಗುರುವಾರ ಏರ್ಪಡಿಸಿದ್ದ ‘ವಿಶ್ವ ತೆಂಗು ದಿನಾಚರಣೆ’ ಕಾರ್ಯಕ್ರಮವನ್ನು ಬೂಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಉದ್ಘಾಟಿಸಿದರು. ತೆಂಗು ಮೌಲ್ಯವರ್ಧನೆ ಮತ್ತು ಅದರ ಔಷಧೀಯ ಗುಣಗಳ ಬಗ್ಗೆ ಕೃಷಿಕರು ಅರಿತುಕೊಳ್ಳಬೇಕು. ಆ ಮೂಲಕ ಮುಂಬರುವ ತೆಂಗು ಮತ್ತು ಅದರ ಉಪ ಉತ್ಪನ್ನಗಳಿಗೆ ಸಿಗುವ ಭಾರೀ ಬೇಡಿಕೆಗೆ ಮಾರುಕಟ್ಟೆ ಒದಗಿಸಲು ಅನುಕೂಲವಾಗುತ್ತದೆ ಎಂದು ಬೂಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಹೇಳಿದ್ದಾರೆ.2btl-Thenguಇಲ್ಲಿನ ಬಿ.ಸಿ.ರೋಡ್ ಲಯನ್ಸ್ ಸಭಾಂಗಣದಲ್ಲಿ ತೋಟಗಾರಿಕಾ ಇಲಾಖೆ ಸಹಿತ ತೆಂಗು ಉತ್ಪಾದಕರ ಸೌಹಾರ್ದ ಸಹಕಾರಿ ಸಮಘದ ಮತ್ತು ಲಯನ್ಸ್ ಕ್ಲಬ್ ವತಿಯಿಂದ ಗುರುವಾರ ಏರ್ಪಡಿಸಿದ್ದ ‘ವಿಶ್ವ ತೆಂಗು ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತೆಂಗು ಸಹಕಾರಿ ಸಮಘದ ಅಧ್ಯಕ್ಷ ರಾಜಾ ಬಂಟ್ವಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಬಿ.ವಸಂತ ಬಾಳಿಗಾ, ತೋಟಗಾರಿಕಾ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಶುಭ ಹಾರೈಸಿದರು. ಲಯನ್ಸ್ ಕ್ಲಬ್ ಜಿಲ್ಲಾ ಸಂಪುಟ ಸಂಯೋಜಕ ದಾಮೋದರ ಬಿ.ಎಂ., ಸಂಘದ ನಿರ್ದೇಶಕರಾದ ನಾರಾಯಣ ಪೂಜಾರಿ ದರ್ಖಾಸು, ಸದಾಶಿವ ಬಂಗುಲೆ, ಶರಣ್ಣಪ್ಪ ಉಮ್ಮರಗಿ, ವಿಠಲ ಬಂಗುಲೆ, ಕೃಷ್ಣ ಭಂಡಾರಿ ಭಕ್ತಂಪುರ, ನಾಗೇಶ ಕಲ್ಯಾರ್, ಶಶಿಕಲಾ ಕೆ.ಭಂಡಾರಿ, ಅಂಬಿಕಾ ಹರೀಶ್ ಇದ್ದರು.

ಸಂಘದ ಸಿಇಒ ಹರ್ಷಿತ್ ಕುಮಾರ್ ಲೆಕ್ಕ ಪತ್ರ ಮಂಡಿಸಿದರು. ಉಪಾಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ, ನಿರ್ದೇಶಕ ಪ್ರೇಮನಾಥ ಶೆಟ್ಟಿ ಅಂತರ ವಂದಿಸಿದರು. ಟಿ.ಶೇಷಪ್ಪ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *