ಬಂಟ್ವಾಳ:ಚಿಕ್ಕಮಗಳೂರು ಬಳಿ ಅಪಘಾತದಲ್ಲಿ ನಿಧನರಾದ ರೈತಮುಖಂಡ ಎಂ.ರಾಮು ಚೆನ್ನಪಟ್ಟಣ ಮತ್ತು ಜಿ.ಟಿ.ರಾಮಸ್ವಾಮಿ ಅವರಿಗೆ ಇಲ್ಲಿನ ರೈತ ಸಂಘದ ವತಿಯಿಂದ ‘ಹಸಿರು ನಮನ ಹಾಗೂ ಶ್ರದ್ಧಾಂಜಲಿ’ ಕಾರ್ಯಕ್ರಮ ಲೊರೆಟ್ಟೊ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆಯಿತು.

2btl-Raitha
ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಯಾದವ ಶೆಟ್ಟಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ರೈತ ಸಂಘ ರಾಜ್ಯ ಸಮಿತಿ ಸದಸ್ಯರಾದ ಸನ್ನಿ ಡಿಸೋಜ, ರೈತ ಮುಖಂಡ ಬಿ.ಸುರೇಶ್ ಭಟ್, ಲೋಲಜಾಕ್ಷ ಗೌಡ ಭೂತಕಲ್ಲು ನುಡಿನಮನ ಸಲ್ಲಿಸಿದರು.

ಬಂಟ್ವಾಳ ಸಿಐಟಿಯು ಅಧ್ಯಕ್ಷ ಸುರೇಂದ್ರ ಕೊಟ್ಯಾನ್, ಪ್ರಮುಖರಾದ ರೋನಿ ಮೆಂಡೊನ್ಸ, ಸುಧಾಕರ ಜೈನ್ ಕೊಕ್ರಾಡಿ, ಬಾಲಸುಬ್ರಹ್ಮಣ್ಯ ಹೊಳ್ಳ, ರವಿ ಕುಮಾರ್ ಹೆಗ್ಡೆ, ತುಕಾರಾಮ ಗೌಡ ರ‍್ನೋಜಿ, ಸೆಬಾಸ್ಟಿಯನ್ ಡಿಸೋಜ, ಸುರೇಂದ್ರ ರ‍್ಯ, ರೂಪಾಸ್ ಪಿಂಟೋ, ವಿವಿಯನ್ ಪಿಂಟೋ, ಮಂಜುನಾಥ ಮಡ್ತಿಲ, ರೋಯ್ ಕಾರ್ಲೊ, ಡಿವೈಎಫ್‌ಐ ಮುಖಂಡ ತುಳಸಿದಾಸ್ ವಿಟ್ಲ, ಅಲ್ತಾಫ್ ತುಂಬೆ ಮತ್ತಿತರರು ಇದ್ದರು. ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ ಸ್ವಾಗತಿಸಿ, ಸದಾನಂದ ಶೀತಾಲ್ ವಂದಿಸಿದರು. ಆಲ್ವೀನ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *