ಧರ್ಮಸ್ಥಳ ಕನ್ಯಾಡಿಯ ಶ್ರೀ ರಾಮ ಕಾರುಣ್ಯ ಕಲಾ ಸಂಘದ ಆಶ್ರಯದಲ್ಲಿ ಮಂಗಳೂರಿನ ಡಾನ್ ಬಾಸ್ಕೊ ಸಭಾಂಗಣದಲ್ಲಿ ಅ.25ರಂದು ಶನಿವಾರ ನಡೆದ “ಬಿಲ್ಲವ ಕಲೋತ್ಸವ” ಕಾರ್ಯಕ್ರಮದ ಉದ್ಘಾಟನೆ ಯನ್ನು ಬಿಲ್ಲವ ಮುಖಂಡರಾದ ಜಯ ಸಿ ಸುವರ್ಣ ನೆರವೇರಿಸಿದರು.
“ಬಿಲ್ಲವ ಕಲೋತ್ಸವ”ದಲ್ಲಿ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಶುಭಹಾರೈಸಿದರು. ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತದೋಂದಿಗೆ ಕರೆತರಲಾಯಿತು.
ಸಂಘದ ಅಧ್ಯಕ್ಷ ಬಿ.ಜನಾರ್ದನ ಅಮ್ಮುಂಜೆ ದಂಪತಿ ಹಾಗೂ ಇತರ ಸದಸ್ಯರು ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು.ಯಕ್ಷಗಾನದ ಹಿರಿಯ ಕಲಾವಿದರಾದ ಐರೋಡಿ ಗೋವಿಂದಪ್ಪ,ಸೀತಾರಾಮ್ ಕುಮಾರ್ ಕಟೀಲು,ವಾಮನ ಮಾಸ್ಟರ್ ತುಂಬೆ, ಕ್ರೀಡಾಪಟು ಮಮತಾ ಪೂಜಾರಿ ಸೇರಿದಂತೆ ಬಿಲ್ಲವ ಸಮಾಜದ ಸಾಧಕರನ್ನು ಹಾಗೂ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿಲ್ಲವ ಮಹಾಮಂಡಲ ಮುಂಬಯಿ ಜಯ ಸಿ ಸುವರ್ಣ,ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೇಯರ್ ರಜನಿದುಗ್ಗಣ್ಣ,ರವಿಪೂಜಾರಿ , ದೀಪಕ್ ಕೋಟ್ಯಾನ್,ಅನೇಕ ಬಿಲ್ಲವ ಮುಖಂಡರು ಉಪಸ್ಥಿತರಿದ್ದರು.
ರಂಗಭೂಮಿಯ ಕಲಾವಿದರಿಂದ ಹಾಸ್ಯ ರಸಾಯನ,ಯಕ್ಷ ಕವಿಗಳ ಸಮ್ಮಿಲನ , ಪೆರ್ಮಂಕಿ ಗುರು ಚೆಂಡೆ ಬಳಗದವರಿಂದ ಚೆಂಡೆ ಕುಣಿತ ಹಾಗೂ ಮುಂತಾದ ಕಾರ್ಯಕ್ರಮ ನಡೆಯಿತು. ರಾತ್ರಿ 10ಗಂಟೆಯಿಂದ ಬೆಳಗ್ಗಿನವರೆಗೆ ಶ್ರೀದೇವಿ ಲೀಲಾಮೃತಂ ಯಕ್ಷಗಾನ ಪ್ರದರ್ಶನ ನಡೆಯಿತು.











