ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಪ್ರಯುಕ್ತ `ಯೋಧರಿಗೆ ನಮನ’ ಕಾರ್ಯಕ್ರಮ ಆಯೋಜಿಸಲಾಯಿತು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ,ದೇಶದ ರಕ್ಷಣೆಯೇ ಮೂಲ ಕಾಯಕವೆಂದು ತಿಳಿದು, ದೇಶಕ್ಕೋಸ್ಕರ ಜೀವವನ್ನೇ ಮುಡಿಪಾಗಿರಿಸುವ ಯೋಧರನ್ನು ಸ್ಮರಿಸಬೇಕಾಗಿರುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ನಮ್ಮ ನಾಳೆಗಳಿಗಾಗಿ ಗಡಿಯಲ್ಲಿ ಕಾಯುವ ಯೋದರ ಸ್ಮರಣೆ ಒಂದು ದಿವಸಕ್ಕೆ ಮೀಸಲಾಗಿರಬಾರದು ಅನುದಿನವು ಯೋಧರ ಬಗ್ಗೆ ಗೌರವ ನಮಗಿರಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ಪ್ರಾಂಶುಪಾಲ ಪ್ರದೀಪ್‌ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಶಿಕ್ಷಕ ಜಯಶೀಲ್ ಕಾರ್ಯಕ್ರಮ ನಿರೂಪಿಸಿದರು.
ಭಾರತ ವಂದನ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಗೈದ ಯೋಧರ ಸ್ಮರಣಾರ್ಥ ಪುಷ್ಪ ನಮನ ಸಲ್ಲಿಸಲಾಯಿತು.
