ಕೈಕಂಬ : ಗುರುಪುರ ಕೈಕಂಬದ ಶ್ರೀರಾಮ ಸಭಾಂಗಣದಲ್ಲಿ ಶನಿವಾರ ಕೈಕಂಬ ಬ್ರಾಹ್ಮಣ ಸಭಾದಿಂದ ಗುರು ವಂದನಾ ಕಾರ್ಯಕ್ರಮವುನಡೆಯಿತು.ವೇದಮೂರ್ತಿ ಆದ್ಯಪಾಡಿ ಸದಾಶಿವ ಭಟ್, ಪಂಡಿತೋತ್ತಮ ಕೃಷ್ಣ ಭಟ್ ದೈವಂಗಳ ಗುಡ್ಡೆ ಆದ್ಯಪಾಡಿ ಮತ್ತು ನಿವೃತ್ತ ಶಿಕ್ಷಕಿ ಶಕುಂತಲಾ ಎಂ ರಾವ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. “ಸಭಾವು ಅರ್ಹರನ್ನು ಗುರುತಿಸಿ ಸನ್ಮಾನಿಸಿದೆ. ಇದು ಸಂತೋಷದ ಕೆಲಸ” ಎಂದು ಸನ್ಮಾನಿತರು ಹೇಳಿದರು.

ಶ್ರೀಪತಿ ಆಚಾರ್ಯ ನಾರಳ ಸ್ವಾಗತಿಸಿದರು. ಸಭಾದ ಸ್ಥಾಪಕ ಸದಸ್ಯರು ಇದ್ದರು. ರಮೇಶ್ ಆಚಾರ್ಯ ನಾರಳ ಕಾರ್ಯಕ್ರಮ ನಿರೂಪಿಸಿದರೆ, ಪ್ರಸನ್ನ ರಾವ್ ಕೈಕಂಬ ವಂದಿಸಿದರು.
