ಕೈಕಂಬ : ತೆಂಕುತಿಟ್ಟಿನ ಮೇರು ಕಲಾವಿದ, ಸುಮಾರು ಆರು ದಶಕಗಳ ಕಾಲ ತಿರುಗಾಟ ನಡೆಸಿರುವ ಸಂಪಾಜೆ ಶೀನಪ್ಪ ರೈ(78) ಇಂದು ಬೆಳಿಗ್ಗೆ ಸುದೀರ್ಘ ಕಾಲದ ಅನಾರೋಗ್ಯದಿಂದ ವಿಧಿವಶರಾದರು.WhatsApp Image 2021-07-13 at 12.44.21 PMಮೂಲತಃ ಸುಳ್ಯ ಸಂಪಾಜೆಯವರಾದ ರೈಯವರು, ಇತ್ತೀಚಿನ ಕೆಲವು ವರ್ಷಗಳಿಂದ ಪುತ್ರನ ಸುರತ್ಕಲ್ ಮನೆಯಲ್ಲಿ ವಾಸಿಸುತ್ತಿದ್ದರು. ಕೊನೆಯದಾಗಿ ಹನುಮಗಿರಿ ಯಕ್ಷಗಾನ ಮೇಳದಲ್ಲಿ ತಿರುಗಾಟ ನಡೆಸಿದ್ದರು. WhatsApp Image 2021-07-13 at 12.44.20 PMಆರಂಭದಿ0ದ ಹಲವು ವರ್ಷ ಕಟೀಲು ಮೇಳದಲ್ಲಿ ಬಣ್ಣ ಹಚ್ಚಿದ್ದ ಇವರು, ಎಡನೀರು ಮತ್ತು ಹೊಸನಗರ ಯಕ್ಷಗಾನ ಮೇಳಗಳಲ್ಲೂ ತಿರುಗಾಟ ನಡೆಸಿದ್ದರು. ರಕ್ತ ಬೀಜಾಸುರ, ಹಿರಣ್ಯಾಕ್ಷ, ಶಿಶುಪಾಲ ಮೊದಲಾದ ರಕ್ಕಸ ಪಾತ್ರಗಳ ಮೂಲಕ ಯಕ್ಷ ಪ್ರೇಮಿಗಳನ್ನು ರಂಜಿಸಿದ್ದರು. ಇವರಿಗೆ ಪತ್ನಿ , ಪುತ್ರ , ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *