ಮೂಡುಬಿದಿರೆ: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆ ಖಂಡಿಸಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ತನ್ನ ಸೈಕಲ್ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಪುಟ್ಟರಾಜು ಅವರಿಗೆ ಮೂಡುಬಿದಿರೆ ಕಾಂಗ್ರೆಸ್ ವತಿಯಿಂದ ಮನವಿ ಸಲ್ಲಿಸಿದರು.WhatsApp Image 2021-07-09 at 12.51.52 PMನಂತರ ಮಾಧ್ಯಮದೊಂದಿಗೆ ಮಾತನಾಡಿದ ಅಭಯಚಂದ್ರ ಅವರು ಬೆಲೆ ಏರಿಕೆಯ ಬಗ್ಗೆ ಕಾಂಗ್ರೆಸ್ ಪಕ್ಷವು ಕರ್ನಾಟಕ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಅದರಂತೆ ತಾವು ಕೂಡಾ ಮೂಡುಬಿದಿರೆಯಲ್ಲಿ 25 ಜನರು ಸೇರಿ ಸೈಕಲ್ ಜಾಥಾ ನಡೆಸುವುದಾಗಿ ಪೊಲೀಸ್ ಇಲಾಖೆಯಲ್ಲಿ ಅನುಮತಿ ಕೇಳಿದ್ದೆವು ಆದರೆ ಇಲಾಖೆಯಿಂದ ತಾವು ಜಾಥಾ ಮಾಡಿದರೆ ಸೆಕ್ಷನ್ ಹಾಕುವುದಾಗಿ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ತಾನೊಬ್ಬನೇ ಸೈಕಲ್‌ನಲ್ಲಿ ಬಂದು ಮನವಿಯನ್ನು ಸಲ್ಲಿಸಿದ್ದೇನೆ ಎಂದ ಅವರು ಇಂದು ದೇಶದಲ್ಲಿ ಪರಿಸ್ಥಿತಿ ತುರ್ತು ಪರಿಸ್ಥಿತಿಗಿಂತಲೂ ಹೀನಾಯವಾಗಿದೆ. ಆದ್ದರಿಂದ ಪ್ರತಿಭಟಿಸುವ ಹಕ್ಕನ್ನು ಕಳೆದುಕೊಂಡಿದ್ದೇವೆ ಎಂದರು.

By suddi9

Leave a Reply

Your email address will not be published. Required fields are marked *