ಕೈಕಂಬ : ಹನುಮಾನ್ ಮಂದಿರ(ರಿ)ಎಡಪದವು ಮತ್ತು ಭಾರತೀಯ ಜನತಾ ಪಕ್ಷ ಎಡಪದವು ಮಹಾಶಕ್ತಿ ಕೇಂದ್ರದ ಜಂಟಿ ಆಶ್ರಯದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿಯ ಅಂಗವಾಗಿ ಹನುಮಾನ್ ಮಂದಿರದ ಪರಿಸರದಲ್ಲಿ ಶನಿವಾರ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿಯವರು ಮಂದಿರದ ವಠಾರದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಶಾಸಕರು ಹನುಮಾನ್ ಮಂದಿರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಮಂದಿರದ ಅಧ್ಯಕ್ಷ ವಿಜಯ ಗೌಡ ಶಿಬ್ರಿಕೆರೆ, ಅರ್ಚಕರಾದ ಶ್ರೀ ವಿಜೇತ್ ಭಟ್, ಶ್ರೀಮತಿ ವಿದ್ಯಾಮಲ್ಯ, ನಿಶಾಂತ್, ನಾರಾಯಣ ಬೋರುಗುಡ್ಡೆ, ಎಡಪದವು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಕುಮಾರ್, ಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷ ಸುಕುಮಾರ ದೇವಾಡಿಗ, ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ಎಡದಪದವು ಪಂಚಾಯತ್ ಸದಸ್ಯರಾದ ಕುಶಲ ಬೋರುಗುಡ್ಡೆ,ಅಪ್ಪು ಕಣ್ಣೊರಿ, ರುಕ್ಮಯ್ಯ ನಾಯ್ಕ್,ಜ್ಯೋತಿ ಶೆಟ್ಟಿ, ಅನಸೂಯ, ಮಂದಿರ ಸಮಿತಿ ಸದಸ್ಯರುಗಳಾದ ಕೌಶಿಕ್ ಶಿಬ್ರಿಕೆರೆ, ದೇವರಾಜ್ ಶಿಬ್ರಿಕೆರೆ, ನಿಖಿತ್ ಬೋರುಗುಡ್ಡೆ, ಹರ್ಷಿತ್,ಪದಾಧಿಕಾರಿಗಳು, ಸ್ಥಳಿಯರಾದ ಚಂದ್ರಶೇಖರ ಎಡಪದವು ಹಾಗೂ ಸ್ಥಳೀಯರು ಹಾಜರಿದ್ದರು
