ಬಂಟ್ವಾಳ : ತಾಲ್ಲೂಕಿನ ಸಿದ್ಧಕಟ್ಟೆಯಲ್ಲಿ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಆರನೇ ಶಾಖೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಸೋಮವಾರ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಮತ್ತಿತರರು ಇದ್ದಾರೆ. ಸಿದ್ಧಕಟ್ಟೆ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ೬ನೇ ಶಾಖೆ ಶುಭಾರಂಭ
ಈ ಜಿಲ್ಲೆಯಲ್ಲಿ ಭೂ ಮಸೂದೆ ಕಾಯ್ದೆ ಜಾರಿಗೊಂಡ ಬಳಿಕ ಹಿಂದುಳಿದ ಮತ್ತು ದುರ್ಬಲ ಸಮುದಾಯ ಸುಶಿಕ್ಷಿತರಾಗಿ ಬಲಿಷ್ಟಗೊಂಡು ಆರ್ಥಿಕ ಸ್ವಾವಲಂಬನೆ ಮತ್ತು ಸಬಲೀಕರಣಗೊಳ್ಳಲು ಸಾಧ್ಯವಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಇಲ್ಲಿನ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಸಿದ್ಧಕಟ್ಟೆ ಸ್ವಂತ ಕೊಠಡಿಯಲ್ಲಿ ಸೋಮವಾರ ಆರಂಭಗೊಡ ೬ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ೧೫ ವರ್ಷಗಳ ಹಿಂದೆ ಆರಂಭಗೊಂಡು ರೂ ೩೭ ಕೋಟಿಗೂ ಮಿಕ್ಕಿ ಆರ್ಥಿಕ ವ್ಯವಹಾರ ನಡೆಸುವ ಮೂಲಕ ಸಂಘವು ಇತರರಿಗೆ ಮಾದರಿಯಾಗಿ ಬೆಳೆದು ನಿಂತಿದೆ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಶಾಖಾ ಕಚೇರಿ ಉದ್ಘಾಟಿಸಿ ಮಾತನಾಡಿ, ಗ್ರಾಮಿಣ ಭಾಗದ ಜನರ ಆರ್ಥಿಕ ಶಕ್ತಿ ಬಲಿಷ್ಟಗೊಂಡಾಗ ನೈಜ ಆತ್ಮ ನಿರ್ಭರ ಭಾರತ ನಿರ್ಮಾಣವಾಗುತ್ತದೆ ಎಂದರು. ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಬೊಳ್ಳಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮರ್ಥ ಆಡಳಿತ ಮಂಡಳಿ ಮತ್ತು ಉತ್ಸಾಹಿ ಮಹಿಳಾ ಸಿಬ್ಬಂದಿಗಳಿಂದ ಎಲ್ಲಾ ಶಾಖೆಗಳು ಯಶಸ್ಸು ಕಂಡಿದೆ ಎಂದರು. ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಪೂಜಾರಿ ಅಳಕೆ ಗಣಕೀಕೃತ ವ್ಯವಸ್ಥೆಗೆ ಚಾಲನೆ ನಿಡಿದರು.
ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರಾದ ರತ್ನಕುಮಾರ್ ಚೌಟ, ಪ್ರಭಾಕರ ಪ್ರಭು, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಂಗೇರ ಶುಭ ಹಾರೈಸಿದರು. ಪ್ರಮುಖರಾದ ಬೇಬಿ ಕುಂದರ್, ಕೃಷ್ಣಪ್ರಸಾದ್ ಕೊಂಪದ್ವು, ಹೇಮಚಂದ್ರ ಸಿದ್ದಕಟ್ಟೆ, ಕಿರಣ್ ಕುಮಾರ್ ಮಂಜಿಲ, ದೇವಪ್ಪ ಕರ್ಕೇರ, ಸೀತಾರಾಮ ಶಾಂತಿ, ಅಶೋಕ ಆಚಾರ್ಯ, ಕಟ್ಟಡ ಮಾಲೀಕ ಆನಂದ ಪೂಜಾರಿ, ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾದ ಅಶೋಕ್ ಪೂಜಾರಿ ಕೋಮಾಲಿ, ಜಯಶಂಕರ್ ಕಾನ್ಸಾಲೆ, ವಾಣಿ ವಸಂತ, ಸಿಇಒ ಮಮತಾ ಜಿ., ಉಪ ಸಿಇಒ ಪಲ್ಲವಿ ಲೋಕೇಶ್, ಶಾಖಾ ವ್ಯವಸ್ಥಾಪಕಿ ಅಕ್ಷಿತಾ ಕೆ., ಸಲಹಾ ಸಮಿತಿ ಸದಸ್ಯರಾದ ಗೋಪಾಲ ಅಂಚನ್, ಜಗದೀಶ ಕೊಯಿಲ, ದಿನೇಶ ಶಾಂತಿ ಮತ್ತಿತರರು ಇದ್ದರು. ನಿರ್ದೇಶಕರಾದ ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿ, ರಮೇಶ್ ಅನ್ನಪ್ಪಾಡಿ ವಂದಿಸಿದರು.
