ಬಂಟ್ವಾಳ: ಜನ ಸಂಘದ ಸಂಸ್ಥಾಪಕರಾಗಿ ರಾಷ್ಟ್ರೀಯ ಸಮಗ್ರತೆ ಸಾಧಿಸುವ ಹಾಗೂ ರಾಜಕೀಯಕ್ಕೆ ಎದುರಾದ ರಾಜಕೀಯ ಸಿದ್ಧಾಂತವನ್ನು ನೀಡಿದ ವ್ಯಕ್ತಿ ಡಾಕ್ಟರ್ ಶ್ಯಾಮ್ ಪ್ರಸಾದ್ ಮುಖರ್ಜಿ .1951ರಲ್ಲಿ ಜನ ಸಂಘವನ್ನು ಸ್ಥಾಪಿಸಿ ಅನೇಕ ಹೋರಾಟಗಳ ಮೂಲಕ ದೇಶವನ್ನು ಸುತ್ತಿ ದೇಶಕ್ಕೆ ತತ್ತ್ವ ಬದ್ಧತೆ ಹಾಗೂ ದೂರಗಾಮಿ ಯೋಜನೆ ಯೋಚನೆಯನ್ನು ಮುಖಾಂತರ ಭಾರತದ ಭವ್ಯ ಪರಂಪರೆಯನ್ನು ಕಂಡ ಮಹಾನ್ ವ್ಯಕ್ತಿ ಡಾಕ್ಟರ್ ಮುಖರ್ಜಿ ಯವರು ಎಂದು ಪ್ರಸಾದ್ ಕುಮಾರ್ ಹೇಳಿದರು .
ಅವರು ಬುಧವಾರ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ನಡೆದ ಡಾಕ್ಟರ್ ಶ್ಯಾಂ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು .ಅಧ್ಯಕ್ಷತೆಯನ್ನು ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ವಹಿಸಿದ್ದರು . ಕಾರ್ಯಕ್ರಮದಲ್ಲಿ ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.
ಊಈ ಸಂದರ್ಭದಲ್ಲಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಡೋಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ ಹಾಗೂ ರಮನಾಥ ರಾಯಿ, ರಾಜ್ಯ ಜಿಲ್ಲಾ ಪ್ರಮುಖರು ಕ್ಷೇತ್ರದ ಪದಾಧಿಕಾರಿಗಳು ಕ್ಷೇತ್ರದ ಮೋರ್ಚಾದ ಪದಾಧಿಕಾರಿಗಳು ಪ್ರತಿನಿಧಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಬಿ ಸಿ ರೋಡು ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
