ಕೈಕಂಬ : ಮಂಗಳೂರು ಕೃಷಿ ಇಲಾಖೆಯು ಗಂಜಿಮಠ ಪಂಚಾಯತ್ ವ್ಯಾಪ್ತಿಯ ಬಡಗ ಉಳೇಪಾಡಿ ಗ್ರಾಮದ ತಮ್ಮಯ್ಯ ಪೂಜಾರಿಯವರ ಮೂರು ಎಕ್ರೆ ಬಾಕಿಯಾರು ಗದ್ದೆಯಲ್ಲಿ ಬುಧವಾರ ಹಮ್ಮಿಕೊಂಡ `ಹಡಿಲು ಭೂಮಿ ಭತ್ತದ ಕೃಷಿ’ಗಾಗಿ ಟ್ರ‍್ಯಾಕ್ಟರ್ ಮೂಲಕ ಉಳುಮೆ ಮಾಡಿ ಶಾಸಕ ಡಾ ವೈ ಭರತ್ ಶೆಟ್ಟಿ ಉದ್ಘಾಟಿಸಿದರು.gur-june-23-hadilu-4

ನಂತರ ಮಾತನಾಡಿದ ಅವರು ಕೊರೊನಾ ಬಂದ ನಂತರ ಯುವಕರು ಕೃಷಿ ಬಗ್ಗೆ ಆಸಕ್ತಿ ತಾಳಿದ್ದು, ಸರ್ಕಾರ ಹಡಿಲು ಭೂಮಿಯಲ್ಲಿ ಭತ್ತದ ಕೃಷಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.gur-june-23-hadilu-3

gur-june-23-hadilu-1ಕಾರ್ಯಕ್ರಮದಲ್ಲಿ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಉಪಾಧ್ಯಕ್ಷೆ ಕುಮುದಾ ನಾಯ್ಕ್, ಮಂಗಳೂರು ನಗರ ಉತ್ತರ ಮಂಡಲ ಅಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಕೊಟ್ಟಾರಿ ಮತ್ತು ಸಂದೀಪ್ ಪಚ್ಚನಾಡಿ, ಗುರುಪುರ ಮಹಾಶಕ್ತಿ ಕಾರ್ಯದರ್ಶಿ ರಾಜೇಶ್ ಸುವರ್ಣ, ತಾಪಂ ನಿಕಟಪೂರ್ವ ಸದಸ್ಯ ವಿಶ್ವನಾಥ ಶೆಟ್ಟಿ, ಪಂಚಾಯತ್ ಸದಸ್ಯರಾದ ಜಯಾನಂದ ಕುಲಾಲ್, ಸೀತಾರಾಮ ಪೂಜಾರಿ, ಸುಮಿತ್ರಾ ಎಂ, ಕಸ್ತೂರಿ, ಲೋಲಾಕ್ಷಿ, ಮಂಗಳೂರು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ಕೆ ಆರ್, ಪಕ್ಷ ಪ್ರಮುಖರಾದ ಗಣೇಶ್ ಪಾಕಜೆ, ಶ್ರೀಕರ ಶೆಟ್ಟಿ ಗುರುಪುರ, ವಿನಯ್ ಗುರುಪುರ, ಶೋಧನ್ ಆದ್ಯಪಾಡಿ, ಅಮರೇಶ್ ಬೇಕಲ್, ಮಾಧವ ಕಾಜಿಲ, ಥಾಮಸ್ ಸಿಕ್ವೇರ, ಪ್ರವೀಣ್ ಶೆಟ್ಟಿ, ಸುಕೇಶ್ ಮಾಣೈ ಹಾಗೂ ಪಕ್ಷ ಕಾರ್ಯಕರ್ತರು, ಕೃಷಿಕರು ಉಪಸ್ಥಿತರಿದ್ದರು. ಗುರುಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಹನ್ ಅತಿಕಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *