ಕೈಕಂಬ : ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿ ಪ್ರಾಯೋಜಕತ್ವದಲ್ಲಿ ಜನ ಸಂಘ ಸಂಸ್ಥಾಪಕ ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿಯವರ `ಬಲಿದಾನ್ ದಿವಸ್’ ಪ್ರಯುಕ್ತ ಮಳಲಿ ಬಡಗ ಉಳೇಪಾಡಿ ಗ್ರಾಮದಲ್ಲಿ ಆಯೋಜಿಸಲಾದ ಸಂಸ್ಮರಣೆ ಕಾರ್ಯಕ್ರಮವನ್ನು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಹಾಗೂ ಮಂಡಲ ಅಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ ದೀಪ ಬೆಳಗಿಸಿ ಉದ್ಘಾಟಿಸಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.gur-june-23-Dr. mukharji-3

ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಡಾ. ಮುಖರ್ಜಿಯವರ `ಬಲಿದಾನ್ ದಿವಸ್’ ಸಂಸ್ಮರಣೆಯ ಪ್ರಥಮ ಕಾರ್ಯಕ್ರಮ ಇದಾಗಿದ್ದು, ಜುಲೈ ೬ರಂದು ಅವರ ಜನ್ಮದಿನದಂದು ಸಮಾರೋಪ ನಡೆಯಲಿದೆ. ಕೇಂದ್ರದ ಪ್ರಥಮ ಸಂಪುಟದಲ್ಲಿ ಮಂತ್ರಿಯಾಗಿದ್ದ ಇವರು ಭಾರತ ಮತ್ತು ದೇಶದ ಅವಿಭಾಜ್ಯ ಪ್ರದೇಶವಾದ ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ, ಧ್ವಜ ಮತ್ತು ೩೭೦ನೇ ವಿಧಿ ಬೇಕಿಲ್ಲವೆಂದು ಸರ್ಕಾರದಿಂದ ಹೊರ ಬಂದು ರಾಷ್ಟ್ರೀಯತೆಗಾಗಿ ಹೋರಾಟ ನಡೆಸಿದ ಮಹಾನ್ ರಾಷ್ಟ್ರೀಯವಾದಿಯಾಗಿದ್ದರು. ಕಾಶ್ಮೀರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಡಾ. ಮುಖರ್ಜಿಯವರ ತತ್ವ-ಸಿದ್ಧಾಂತಗಳಿಗೆ ಬದ್ಧವಾಗಿರುವ ಪ್ರಧಾನಿ ಮೋದಿಯವರು ಕಾಶ್ಮೀರದಿಂದ ೩೭೦ನೇ ವಿಧಿ ರದ್ದುಗೊಳಿಸಿ ಅವರ ಚಿಂತನೆಗಳಿಗೆ ಗೌರವ ನೀಡಿದ್ದಾರೆ ಎಂದರು.gur-june-23-Dr. mukharji-4

ಅಧ್ಯಕ್ಷತೆ ವಹಿಸಿ ಮಾತನಾಡಿದ ತಿಲಕ್‌ರಾಜ್ ಕೃಷ್ಣಾಪುರ ಡಾ. ಮುಖರ್ಜಿಯವರ ನಮ್ಮ ಕಾರ್ಯಕರ್ತರು ಅವರ ಸಿದ್ಧಾಂತ ಮೈಗೂಡಿಸಿಕೊಳ್ಳಬೇಕು. ಅವರ ಸಂಸ್ಮರಣೆಗಾಗಿ ನಮ್ಮ ಪರಿಸರದಲ್ಲಿ ಗಿಡ ನೆಟ್ಟು ನೀರೆದು ಪೋಷಿಸಬೇಕು ಎಂದರು. ಬಳಿಕ ಮಂಡಲದ ವತಿಯಿಂದ ಪರಿಸರದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

ಸಭೆಯಲ್ಲಿ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ಕಾರ್ಯದರ್ಶಿಗಳಾದ ಸಂದೀಪ್ ಪಚ್ಚನಾಡಿ ಮತ್ತು ರಾಜೇಶ್ ಕೊಟ್ಟಾರಿ, ಪಂಚಾಯತ್ ಉಪಾಧ್ಯಕ್ಷೆ ಕುಮುದಾ ನಾಯ್ಕ್, ಪಂಚಾಯತ್ ಸದಸ್ಯರು, ತಾಪಂ ಮಾಜಿ ಸದಸ್ಯ ವಿಶ್ವನಾಥ ಶೆಟ್ಟಿ, ಪಕ್ಷ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *