ಮೂಡಬಿದಿರೆ: ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಕೋವಿಡ್ ಕಾರ್ಯಪಡೆ ಸದಸ್ಯರ ಸಭೆಯನ್ನು ನಡೆಯಿತು. ಸಭೆಯಲ್ಲಿ ಮಣಿಪಾಲ ಕಸ್ತೂರಬಾ ಮೆಡಿಕಲ್ ಆಸ್ಪತ್ರೆಯ ನುರಿತ ವೈದ್ಯಾಧಿಕಾರಿಗಳು ಕೊರೊನ ಬಗ್ಗೆ ಮಾಹಿತಿ ನೀಡಿದರು.

ಕೋವಿಡ್ ಕಾರ್ಯಪಡೆ ಸದಸ್ಯರಿಗೆ ಗ್ರಾಮ ಪಂಚಾಯತಿ ವತಿಯಿಂದ ಮಾಸ್ಕ್ ಸ್ಯಾನಿಟೇಸರ್ ಹಾಗೂ ಸೋಪ್ ನೀಡಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾ, ಉಪಾಧ್ಯಕ್ಷ ಶಶಿಧರ ಎಂ., ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಗ್ಗಪ್ಪ ಮೂಲ್ಯ ಉಪಸ್ಥಿತರಿದ್ದರು.

ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
