ಬಂಟ್ವಾಳ:ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ರೂ 10ಲಕ್ಷ ವೆಚ್ಚದ 25 ಆಕ್ಷಿಜನ್ ಸಿಲಿಂಡರ್ ಮತ್ತು ಸುಸಜ್ಜಿತ ಐದು ಬೆಡ್ ಗಳನ್ನು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರು ಬುಧವಾರ ಕೊಡುಗೆಯಾಗಿ ಸಲ್ಲಿಸಿದರು.

26btl-Hospital
ಇದೇ ವೇಳೆ ಕೋವಿಡ್ ಸೊಂಕಿತರಿಗೆ ಜಿಲ್ಲಾಡಳಿತ ನೀಡಿದ ಉಚಿತ ಮೆಡಿಕಲ್ ಕಿಟ್ ಗಳನ್ನು ಆಶಾ ಕಾರ್ಯಕರ್ತೆಯರಿಗೆ ಹಸ್ತಾಂತರಿಸಿದರು.ಈಗಾಗಲೇ ಬಂಟ್ವಾಳಕ್ಕೆ ಒಟ್ಟು 349 ಆಕ್ಸಿಮೀಟರ್, ಒಂದು ಸಾವಿರ ವೈದ್ಯಕೀಯ ಕಿಟ್ ಬಂದಿದೆ. ಶೀಘ್ರದಲ್ಲೇ ಆಶಾ ಕಾರ್ಯಕರ್ತೆಯರು ಸೋಂಕಿತರ ಮನೆಗೆ ತಲುಪಿಸುವರು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ್, ತಹಶೀಲ್ದಾರ್ ರಶ್ಮಿ ಎಸ್.ಆರ್., ಆರೊಗ್ಯಾಧಿಕಾರಿ ಡಾ. ದೀಪಾ ಪ್ರಭು, ಪ್ರಭಾರ ವೈದ್ಯಾಧಿಕಾರಿ ಡಾ. ಸೌಮ್ಯ, ತಾಲ್ಲೂಕು ಪಂಚಾಯಿತಿ ಇಒ ರಾಜಣ್ಣ, ಬೂಡ ಆಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಪ್ರಮುಖರಾದ ದೇವಪ್ಪ ಪೂಜಾರಿ, ಡೊಂಬಯ ಅರಳ, ಕೇಶವ ದೈಪಲ ಇದ್ದರು

By Suddi9

Leave a Reply

Your email address will not be published. Required fields are marked *