ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾದ ಅನಾಥ ಕುಟುಂಬವೊಂದಕ್ಕೆ ಸಕಾಲದಲ್ಲಿ ನೆರವು ನೀಡುವ ಭರವಸೆಯ ಮೂಲಕ ಸಾರ್ವಜನಿಕ ವಲಯದಲ್ಲಿ ಬಾರಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಲಾಕ್ ಡೌನ ಬಳಿಕ ಮನೆಕಳೆದುಕೊಂಡು, ಕೆಲಸವಿಲ್ಲದೆ, ಊಟಕ್ಕೆ ಗತಿಯಿಲ್ಲದೆ ಬೀದಿಯಲ್ಲಿದ್ಧ ಕುಟುಂಬಕ್ಕೆ ಆಸರೆಯಾಗಿ ನಿಂತ ಬಂಟ್ವಾಳ ಶಾಸಕರ ನಡೆ ಮೆಚ್ಚುಗೆಗೆ ಪಾತ್ರವಾಗಿದೆ. ನೈಜವಾದ ಕಥೆ ಏನು ಗೊತ್ತೇ? ಮೂಲತಃ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಮುಟ್ಟಿಕಲ್ಲು ಎಂಬಲ್ಲಿನ ಕುಟುಂಬ ವಗ್ಗದ ಕುಜಿಲಬೆಟ್ಟು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗಂಡ ಮೇಸ್ತ್ರಿ ಕೆಲಸ ಸಹಾಯಕರಾಗಿದುಡಿದು ಹೆಂಡತಿ ಮತ್ತು ಎರಡು ವರ್ಷದ ಮಗುವಿನೊಂದಿಗೆ ಜೀವನ ಮಾಡುತ್ತಿದ್ದರು.ದಿನ ದುಡಿದರೆ ಮಾತ್ರ ಒಂದು ಹೊತ್ತು ಊಟ ಎಂಬ ಸ್ಥಿತಿಯಲ್ಲಿ ದ್ದ ಕುಟುಂಬಕ್ಕೆ ಕೊರೊನಾ ಲಾಕ್ ಡೌನ್ ಸಿಡಿಲು ಬಡಿದಂತಾಗಿದೆ. ಕೆಲಸ ವಿಲ್ಲದ ಕುಟುಂಬ ಮನೆ ಬಾಡಿಗೆಕೊಡಲು ಕೈಯಲ್ಲಿ ಡುಡ್ಡಿಲ್ಲ, ಊಟಕ್ಕೆ ಗತಿಯಲ್ಲಿ ಎಂಬ ಸ್ಥಿತಿಯಲ್ಲಿ ಬಾಡಿಗೆ ಮನೆ ಬಿಟ್ಟು ಹೊರಗೆ ಬರಬೇಕಾಯಿತು. ದಾರಿ ಯಾವುದಯ್ಯ ದಾರಿ ತೊರಿಸಯ್ಯ ಎಂಬಂತೆ ಮನೆ ಬಿಟ್ಟು ಬೀದಿಗೆ ಬಂದ ಎರಡು ವರ್ಷದ ಎಳೆಯ ಕಂದಮ್ಮನ ಜೊತೆಯಲ್ಲಿ ಬಿಸಿರೋಡು ಬಸ್ ನಿಲ್ದಾಣದಲ್ಲಿ ಕುಳಿತುಕೊಂಡಿದ್ದರು. ಇವರ ಸ್ಥಿತಿಯನ್ನು ನೋಡಿ ಅಸಾಯಕತೆಯಲ್ಲಿ ಇರುವಾಗ ಪರಿಸ್ಥಿತಿಯನ್ನು ನೋಡಿದ ಕರ್ಪೆ ಗ್ರಾಮದ ಅಡಂಗಾಜೆ ನಿವಾಸಿ ಪ್ರಶಾಂತ್ ಶಾಂತಿ ರವರು ಕುಟುಂಬ ವನ್ನು ತನ್ನ ಮನೆಗೆ ಕರೆದುಕೊಂಡು ಬಂದು ವಾಸ್ತವ್ಯ ಸಮೇತ ಊಟೋಪಚಾರ ವ್ಯವಸ್ಥೆ ಮಾಡಿದ್ದರು. ಇವತ್ತು ಸಂಜೆ ಕರ್ಪೆ ಗ್ರಾಮದಲ್ಲಿ ತಾತ್ಕಾಲಿಕ ವಾಗಿ ಆಸರೆ ಪಡೆದ ಕುಟುಂಬದ ಸದಸ್ಯೆ ವಿಮಲ ಅವರು ತನ್ನ ಕುಟುಂಬ ಪರಿಸ್ಥಿತಿ ಯನ್ನು ವಾಟ್ಸಪ್ ನಲ್ಲಿ ವಿಡಿಯೋ ಮೆಸೇಜ್ ಮುಲಕ ತಿಳಿಸುತ್ತಾ ತನ್ನ ಅಳಲನ್ನು ತೋಡಿಕೊಂಡಿರುವ ವಿಷಯವು ಸಾಮಾಜಿಕ ಜಾಲತಾಣಗಳ ಮುಖಾಂತರ ಹರಿಯಲು ಬಿಟ್ಟಿದ್ದರು. ನಾವು ಕೂಲಿ ಕಾರ್ಮಿಕರು ನಮಗೆ ಮನೆಯಿಲ್ಲ, ಊಟಕ್ಕೆ ಗತಿಯಿಲ್ಲ ಸಾಧ್ಯ ವಾದವರು ಸಹಾಯಮಾಡಿ ಬಂಟ್ವಾಳ ಶಾಸಕರಿಗೆ ಮುಟ್ಟುವರೆಗೆ ಶೇರ್ ಮಾಡಿ ಎಂದಿತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ ಕಂಡ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಯವರು ತಕ್ಷಣವೇ ಸ್ಪಂದಿಸುವ ಮೂಲಕ ಶಾಸಕರ ವಾರ್ ರೂಮ್ ಸದಸ್ಯರು ಹಾಗೂ ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯರಾದ ಪ್ರಭಾಕರ ಪ್ರಭು ಮತ್ತು ಬಿಜೆಪಿ ನಾಯಕರಾದ ರತ್ನಕುಮಾರ್ ಚೌಟರ ಮೂಲಕ ಮನೆಗೆ ಭೇಟಿ ಮಾಡಿಸಿ ನೊಂದ ಮಹಿಳೆ ಯೊಂದಿಗೆ ಶಾಸಕರು ದೂರವಾಣಿ ಮಾತಾಡಿ ನಾಳೆಯಿಂದಲೇ ಸಕಲ ವ್ಯವಸ್ಥೆಯನ್ನು ಪೂರೈಸುವುದಾಗಿ ತಿಳಿಸಿದರು. ಯಾವ ಕೆಲಸ ಮಾಡುವುದಾದರೂ ಅವರಿಗೆ ವ್ಯವಸ್ಥೆ ಮಾಡಿಕೊಡುವ ಜೊತೆಗೆ ತಾತ್ಕಾಲಿಕ ವಾಗಿ ಅವರಿಗೆ ಮನೆ ಹಾಗೂ ದೈನಂದಿನ ಬಳಕೆಗೆ ಬೇಕಾಗುವ ಸಾಮಗ್ರಿಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಿದ್ದಾರೆ.ಈ ಸಂದರ್ಭದಲ್ಲಿ ಶಾಸಕರ ವಾರ್ ರೂಮ್ ಸದಸ್ಯ ದಿನೇಶ್ ಶೆಟ್ಟಿ ದಾಂಬೆದರ್, , ಉಮೇಶ್ ಗೌಡ, ತೇಜಸ್ ಕರ್ಪೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *