ಮೂಡಬಿದಿರೆ: ಶೀರೂರು ಮಠಕ್ಕೆ ಪಟ್ಟಾಭಿಷಿಕ್ತರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಸೋದೆ ಶ್ರೀವಿಶ್ವವಲ್ಲಭ ತೀರ್ಥರ ಜೊತೆಯಾಗಿ ಪಲಿಮಾರು ಮೂಲಮಠಕ್ಕೆ ಭೇಟಿ ನೀಡಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಹಾಗೂ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ ದಂಡ ನಮಸ್ಕಾರವನ್ನು ಮಾಡಿ ಶ್ರೀಮಠದ ಗೌರವ ಸಲ್ಲಿಸಿದರು.
ಈ ಸಂದರ್ಭ ಪಲಿಮಾರು ಉಭಯ ಶ್ರೀಪಾದರು ನೂತನ ಯತಿಗಳನ್ನು ಸಂಮಾನಿಸಿ ತಮ್ಮ ಮಠದ ತತ್ತ್ವ ಸಂಶೋಧನಾ ಸಂಸತ್ ವತಿಯಿಂದ ಮುದ್ರಣವಾದ ಪುಸ್ತಕಗಳನ್ನು ನೀಡಿ ಹರಸಿದರು.
ಪಲಿಮಾರು ಮಠದ ದಿವಾನರಾದ ಶಿಬರೂರು ವೇದವ್ಯಾಸ ತಂತ್ರಿಗಳು , ಸೋದೆ ಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿಗಳು ಹಾಗೂ ಶೀರೂರು ಮಠದ ದಿವಾನರಾದ ಉದಯಕುಮಾರ ಸರಳತ್ತಾಯರು ಉಪಸ್ಥಿತರಿದ್ದರು .
