ಮಂಗಳೂರು: ಹೆಂಡತಿ-ಮಕ್ಕಳನ್ನು ಬಿಟ್ಟು ಸಾರ್ವಜನಿಕ ಬಯಲು ಮಂಟಪದಲ್ಲಿ ಮಲಗುತ್ತಿದ್ದ ಯುವಕನ ತಲೆಗೆ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಉರ್ವ ಠಾಣಾ ವ್ಯಾಪ್ತಿಯ ಮಾರಿಗುಡಿ ಮುಂಭಾಗ ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ. ಉರ್ವ ನಿವಾಸಿ ನಂದ ಅಲಿಯಾಸ್ ನಂದಕುಮಾರ್(42)ಎಂದು ಗುರುತಿಸಲಾಗದೆ .
ಉರ್ವ ನಿವಾಸಿ ನಂದ ಕುಮಾರ್ ಕೆಲವು ವರ್ಷಗಳ ಹಿಂದೆ ನಗರದಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ. ಕುಡಿತದ ಚಟಕ್ಕೆ ಕಟ್ಟುಬಿದ್ದ ನಂದಕುಮಾರ್ ಸಾಲ ಮಾಡಿದ್ದು ತೀರಿಸಲಾಗದೆ ರಿಕ್ಷಾವನ್ನು ಮಾರಿ ಬಳಿಕ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದ. ಹೀಗೆ ದುಡಿಮೆಯ ಹಣದಲ್ಲಿ ಕಂಠಪೂತರ್ಿ ಕುಡಿಯುತ್ತಿದ್ದ ನಂದಕುಮಾರ್ ಮನೆಯಲ್ಲಿ ಜಗಳ ಮಾಡುತ್ತಿದ್ದ ಕಾರಣ ಮನೆಮಂದಿಯೂ ಆತನನ್ನು ದೂರ ಮಾಡಿದ್ದರು. ಮನೆಯಿಂದ ದೂರವಿದ್ದು ಅಲ್ಲಲ್ಲಿ ಕೆಲಸ ಮಾಡಿ ರಾತ್ರಿಯ ವೇಳೆ ಇದೇ ಉವರ್ಾ ಮಾರಿಗುಡಿ ಮುಂಭಾಗದ ಬಯಲು ಮಂಟಪದಲ್ಲಿ ಮಲಗುತ್ತಿದ್ದ ನಂದನನ್ನು ಅಲ್ಲಿಯೇ ಕೊಲೆ ಮಾಡಲಾಗಿದೆ.
ಬುಧವಾರ ರಾತ್ರಿಯೂ ನಂದನನ್ನು ಇದೇ ಪರಿಸರದಲ್ಲಿ ಕಂಡವರಿದ್ದಾರೆ. ರಾತ್ರಿಯ ವೇಳೆ ಆತ ಇದೇ ರಂಗಮಂಟಪದ ಜಗಲಿಯಲ್ಲಿ ಮಲಗುವುದು ಸ್ಥಳೀಯರಿಗೂ ತಿಳಿದಿದೆ. ಆದರೆ ಗುರುವಾರ ಮುಂಜಾನೆ ಸಾರ್ವಜನಿಕರು ರಕ್ತದೋಕುಳಿ ಕಂಡು ಹೌಹಾರಿದ್ದಾರೆ. ಬಯಲು ಮಂಟಪದ ಮೆಟ್ಟಿಲಿನ ಪಕ್ಕವೇ ನಂದನ ಮೃತದೇಹ ಬಿದ್ದಿದೆ. ತಲೆಯ ಮೇಲೆ ಭಾರೀ ಗಾತ್ರದ ಸಿಮೆಂಟ್ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿರುವುದು ಬೆಳಕಿಗೆ ಬರುತ್ತಲೇ ಉರ್ವ ಠಾಣಾ ಪೊಲೀಸರು ದೌಡಾಯಿಸಿದ್ದಾರೆ. ಪೊಲೀಸ್ ಕಮಿಷನರ್ ಹಿತೇಂದ್ರ, ಎಸ್.ಪಿ.ಶರಣಪ್ಪ, ಉರ್ವ ಠಾಣಾ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ನಂದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉರ್ವ ಠಾಣಾ ಪೊಲೀಸರು ಘಟನಾಸ್ಥಳದಲ್ಲಿ ರಾತ್ರಿ ಕಳೆಯುತ್ತಿದ್ದ ಹಲವರ ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ಮಹತ್ವದ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಬಯಲು ಮಂಟಪವನ್ನು ನಂದನಂತೆಯೇ ಇನ್ನೂ ಹಲವಾರು ಮಂದಿ ಆಶ್ರಯ ತಾಣವನ್ನಾಗಿ ಮಾಡಿಕೊಂಡಿದ್ದು ಬುಧವಾರ ರಾತ್ರಿಯೂ ಇವರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದು ಕೊಲೆಯಲ್ಲಿ ಅಂತ್ಯ ಕಂಡಿರುವ ಸಾಧ್ಯತೆಯನ್ನು ಪೊಲೀಸರು ಶಂಕಿಸಿದ್ದಾರೆ. ಇಲ್ಲಿ ರಾತ್ರಿಯ ವೇಳೆ ನಡೆಯುತ್ತಿದ್ದ ಪಾರ್ಟಿ , ಜಗಳ ಎಲ್ಲವೂ ಸ್ಥಳೀಯರಿಗೆ ಗೊತ್ತಿದ್ದು, ನಂದನ ಕೊಲೆಯ ಬಳಿಕ ಆತನ ಜೊತೆ ಇರುತ್ತಿದ್ದವರು ಕಾಣೆಯಾಗಿದ್ದು ಪೊಲೀಸರು ಅವರ ಶೋಧಕಾರ್ಯದಲ್ಲಿ ನಿರತರಾಗಿದ್ದಾರೆ.

