ಮಂಗಳೂರು: ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತರಿಗೆ ಉಚಿತ ಯೋಗ ತರಬೇತಿ ಶಿಬಿರ ಎ.8 ರಿಂದ 28ರ ತನಕ ಪತ್ರಿಕಾಭವನದಲ್ಲಿ ಬೆಳಗ್ಗೆ 6:30ರಿಂದ 7:30ರ ತನಕ ನಡೆಯಲಿದೆ.
ಯೋಗ ಗುರು ಡಾ.ಎಂ.ಜಗದೀಶ್ ಶೆಟ್ಟಿ ಬಿಜೈ ಅವರು ಪತ್ರಕರ್ತರಿಗೆ ಯೋಗಾಸನದ ಬಗ್ಗೆ ತರಬೇತಿ ನೀಡಲಿರುವರು. ಎ.7ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್ ಶಿಬಿರವನ್ನು ಉದ್ಘಾಟಿಸಲಿರುವರು.
