ಬಂಟ್ವಾಳ : ಭರತನಾಟ್ಯ ತರಗತಿ ಉದ್ಘಾಟನೆ. ಬೋಳಂತೂರಿನ ಗುರುಕೃಪಾ ವಠಾರದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ನಡೆಯುವ ನೃತ್ಯ ತರಗತಿಯನ್ನು ಶ್ರೀ ವೆಂಕಪ್ಪ ಎಂ. ಡಿ, ಅಧಿಕಾರಿಗಳು ಜೀವ ವಿಮಾ ನಿಗಮ ಪುತ್ತೂರು ಇವರು ಉದ್ಘಾಟಿಸಿದರು. ಅವರು ಮಾತನಾಡಿ “ಭರತನಾಟ್ಯವು ಭಾರತೀಯ ಸಂಸ್ಕೃತಿಯ ಹಿರಿಮೆ. ಇದನ್ನು ಕಲಿಯುವಲ್ಲಿ ಅವಿರತ ಪ್ರಯತ್ನ ಹಾಗೂ ಗುರುಭಕ್ತಿ ಮುಖ್ಯ. ಅಕಾಡೆಮಿಯ ಮೂಲಕ ಇದನ್ನು ಬೆಳೆಸುವ ಪ್ರಯತ್ನ ಕೈಗೂಡಲಿ” ಎಂದು ಶುಭ ಹಾರೈಸಿದರು.

WhatsApp Image 2021-04-04 at 10.57.55 PM

ಮುಖ್ಯ ಅತಿಥಿಗಳಾಗಿ ಶ್ರೀಮತಿ ಚಿನ್ನಮ್ಮ, ಅಧ್ಯಕ್ಷರು ಶ್ರೀ ಶಾರದಾಂಬ ಮಹಿಳಾ ಹವ್ಯಾಸಿ ಯಕ್ಷಗಾನ ಕಲಾ ಸಂಘ (ರಿ) ಇವರು ಹಾಗೂ ಅಧ್ಯಕ್ಷರಾಗಿ ಶ್ರೀ ರಮೇಶ್ ಕಡಂಬು, ಅಧ್ಯಕ್ಷರು ಬಂಟ್ವಾಳ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ (ರಿ) ಇವರು ಭಾಗವಹಿಸಿದರು. ನೃತ್ಯ ಗುರುಗಳಾದ ವಿದುಷಿ ವಸುಧಾ ಜಿ ಎನ್ ಇವರು ಉಪಸ್ಥಿತರಿದ್ದರು. ಆನಂದ ಜಿ. ಸ್ವಾಗತಿಸಿದರು. ಪೃಥ್ವಿರಾಜ್ ವಂದಿಸಿದರು. ಲಿಖಿತ ಜಿ ಎನ್ ಕರ‍್ಯಕ್ರಮ ನಿರೂಪಿಸಿದರು. ಸಭಾ ಕರ‍್ಯಕ್ರಮದ ಬಳಿಕ ನೃತ್ಯ ವಿದುಷಿ ವಸುಧಾ ಇವರು ಭರತನಾಟ್ಯ ತರಬೇತಿ ಆರಂಭಿಸಿದರು.

By suddi9

Leave a Reply

Your email address will not be published. Required fields are marked *