ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಒಂದು ತಿಂಗಳ ಜಾತ್ರಾಮಹೋತ್ಸವದ ೧೮ ನೇ ದಿನದ ಜಾತ್ರೆಯಂದು ಕೋಲಿಗುಂಟ ಬೆಳ್ಳಿ ರಥೋತ್ಸವ ನಡೆಯುತ್ತದೆ.ಪೊಳಲಿ ದೇವಸ್ಥಾನಕ್ಕೆ ಒಳಪಟ್ಟ ಸಾವಿರ ಸೀಮೆಯವರು ಧ್ವಜರೋಹಣ ಗೊಂಡು ೧೮ ದಿನದವರೆಗೆ ಆ ಪ್ರದೇಶದಲ್ಲಿ ಮಾಂಸಹಾರ ಸೇವನೆ ಮಾಡುತ್ತಿರಲಿಲ್ಲ.1vp koligunta

ಏ. ೧ರಂದು ದೇವರಲ್ಲಿ ತಂತ್ರಿವರ್ಗದವರು,ಅರ್ಚಕರು, ನಟ್ಟೋಜರು ಗುತ್ತಿನವರು ಆಡಳಿತ ಮಂಡಳಿಯವರು ಸೇರಿ ಪ್ರಾರ್ಥಿಸಿ ದೇವಸ್ಥಾನದ ಎಡಬದಿಯಲ್ಲಿದ್ದ ಚೆಂಡಿನಗದ್ದೆಯ ಕೆಳಗಿನ ಭಾಗದ ಗದ್ದೆಯಲ್ಲಿ ನಟ್ಟಿಲ್ ಒಂದನೇ ಮತ್ತು ಎರಡನೇ ಮನೆಯವರು ಎರಡು ಕೋಳಿಗಳನ್ನು ಗುಂಟದಲ್ಲಿ ಕಟ್ಟಿ ಕೋಳಿಗಳನ್ನು ಔಪಚಾರಿಕವಾಗಿ (ಕೋಳಿ ಅಂಕ) ಹಾರಿಸುವರು.

1vp koligunta ನಂತರ ನಾಲ್ಕು ಗುಂಟದಲ್ಲಿ ಕಟ್ಟಿ ಹಾರಿಸಿದ ನಂತರ ಕೊಂಬು ವಾದ್ಯದೊಂದಿಗೆ ದೇವಸ್ಥಾನಕ್ಕೆ ಬಂದು ಪ್ರಸಾದ ನೀಡಿದ ಬಳಿಕ ಮನೆಗಳಲ್ಲಿ ಮಾಂಸಹಾರ ಸೇವನೆ ಮಾಡುವ ಸಾಂಪ್ರದಾಯ ವಿತ್ತು.ಇದಕ್ಕೆ ಕೋಳಿಗುಂಟ ಎನ್ನುತ್ತಾರೆ. ಅಂದು ರಾತ್ರಿ ದೇವರ ಬೆಳ್ಳಿ ರಥೋತ್ಸವ ನಡೆಯುತ್ತದೆ.

By suddi9

Leave a Reply

Your email address will not be published. Required fields are marked *