ಶ್ರೀನಿವಾಸಪುರ : ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪುರಸಭೆಯ 2021 – 22 ನೇ ಸಾಲಿನ ಆಯವ್ಯಯ ಮಂಡನಾ ಸಭೆಯಲ್ಲಿ ರೂ .20,60,000 ಉಳಿತಾಯ ಆಯ ವ್ಯಯಕ್ಕೆ ಒಪ್ಪಿಗೆ ಪಡೆಯಲಾಯಿತು . ಪುರಸಭೆಯ ಒಟ್ಟು ವಾರ್ಷಿಕ ಆದಾಯ ರೂ .38,36,60,000 ಆಗಿದ್ದು , ಆ ಪೈಕಿ ರೂ .38,16,00,000 ಖರ್ಚು ಮಾಡಲು ಸಭೆ ಹೆಚ್ಚು ಚರ್ಚೆ ಇಲ್ಲದೆ ಅಗೀಕಾರ ನೀಡಿತು . ಮಂಡಿಸಲಾದ ಬಜೆಟ್ನಲ್ಲಿ ರಾಜಸ್ವ ಸ್ವೀಕೃತಿಗಳಿಂದ ರೂ .12,60,50,000 , ಬಂಡವಾಳ ಸ್ವೀಕೃತಿಗಳಿಂದ ರೂ .16,92,50,000 , ಅಸಾಧಾರಣ ಸ್ವೀಕೃತಿಗಳಿಂದ ರೂ .8,83,60,000 ಆದಾಯ ನಿರೀಕ್ಷಿಸಲಾಗಿದೆ.
ರಾಜಸ್ವ ಪಾವತಿಗಳಿಗೆ ರೂ .12,19,90,000 , ಬಂಡವಾಳ ಪಾವತಿಗಳಿಗೆ 17,15,00,000 , ಅಸಾಧಾರಣ ಪಾವತಿಗಳಿಗೆ ರೂ .8,81,10,000 ಖರ್ಚು ಮಾಡಲು ನಿರ್ಧರಿಸಲಾಗಿದೆ . ಪುರಸಭೆಯ ಉಪಾಧ್ಯಕ್ಷೆ ಆಯಿಷಾ ನಯಾಜ್ , ಸದಸ್ಯರಾದ ಕೆ. ಅನೀಸ್ ಅಹ್ಮದ್, ಬಿ.ವಿ.ರೆಡ್ಡಿ , ಅತ್ತೂರು ರಾಜಣ್ಣ , ನಾಗರಾಜ್ , ಸರ್ದಾರ್ , ಜಯಲಕ್ಷ್ಮಿ ಆರೋಗ್ಯ ನಿರೀಕ್ಷಕರಾದ ಕೆ.ಜಿ.ರಮೇಶ್ , ಪೃಥ್ವಿರಾಜ್ , ಸಿಇಒ ರಾಜೇಶ್ವರಿ , ಪ್ರತಾಪ್ , ಶಂಕರ್ , ನಾಗೇಶ್ ಇದ್ದರು .
